ಬೆಂಗಳೂರು: ಆರೋಗ್ಯ ಏರುಪೇರಾಗಿ ಆಸ್ಪತ್ರೆಗೆ ದಾಖಲಾದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೆ ಹೆಲ್ತ್ ಟಿಪ್ಸ್ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವರು, ತೀವ್ರ ಕಾರ್ಯಬಾಹುಳ್ಯದ ಮಧ್ಯೆಯೂ ಫೋನ್ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಕೆಲವು ಅಮೂಲ್ಯ ಸಲಹೆಗಳನ್ನು ನೀಡಲು ಅವರು ಮರೆಯಲಿಲ್ಲ. ಸರ್ ತಮ್ಮೆಲ್ಲರ ಶುಭಹಾರೈಕೆಯಿಂದ ನಾನೀಗ ಇನ್ನಷ್ಟು ಗಟ್ಟಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಡಿವಿ ಸದಾನಂದಗೌಡ ಅವರು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಧಾನಿ ಕರೆಯ ಬಗ್ಗೆ ಮಾತನಾಡಿರುವ ಅವರು, ''ತಾವು ಕೋವಿಡ್ನಿಂದ ಚೇತರಿಸಿಕೊಂಡು ಕೆಲಸ ಪ್ರಾರಂಭಿಸಿದ್ದೀರಿ. ಈಗ ಜಾಸ್ತಿ ಶರೀರಕ್ಕೆ ತ್ರಾಸು ಕೊಡಬೇಡಿ. ನಿಮ್ಮ ಕೆಲಸದಲ್ಲಿ 10 ಪ್ರತಿಶತ ಕಡಿತ ಮಾಡಿ. ಆರು ತಿಂಗಳು ನಿಮ್ಮ ಶರೀರಕ್ಕೆ ವಿರಾಮ ಕೊಡಿ. ಆಮೇಲೆ 20 ಪ್ರತಿಶತ ಜಾಸ್ತಿ ಕೆಲಸ ಮಾಡಿ ಅಂತ ಸಲಹೆ ನೀಡಿದ್ದಾರೆ'' ಎಂದು ಹೇಳಿದರು.
PublicNext
04/01/2021 08:03 pm