ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2ನೇ ಮದ್ವೆಗೆ ಕಾರಣ ತಿಳಿಸಿದ ಬಿಜೆಪಿ ಸಂಸದ

ನವದೆಹಲಿ: ಭೋಜ್‌ಪುರಿ ಗಾಯಕ, ನಟ, ಬಿಜೆಪಿ ಸಂಸದ ಮನೋಜ್ ತಿವಾರಿ ತಾವು ಎರಡನೇ ಮದುವೆಯಾಗಲು ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಮನೋಜ್‌ ತಿವಾರಿ ಅವರು ಇತ್ತೀಚೆಗಷ್ಟೇ ತಮ್ಮ ಎರಡನೇ ಮಗಳನ್ನು ಎತ್ತಿಕೊಂಡ ಫೋಟೋ ಟ್ವೀಟ್ ಮಾಡಿ, ''ನಮ್ಮ ಮನೆಗೆ ಹೊಸ ಅತಿಥಿ ಬಂದಿದ್ದಾರೆ. ನನಗೆ ಹೆಣ್ಣು ಮಗುವಾಗಿದೆ'' ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಅವರ ಕುಟುಂಬದ ಬಗ್ಗೆ ಅನೇಕ ಸಂದೇಹಗಳು ಎದ್ದಿದ್ದವು. ಈ ಹಿನ್ನೆಲೆಯಲ್ಲಿ, ಯಾವುದೇ ಗಾಳಿಸುದ್ದಿ ಹರಿದಾಡದಿರಲು ತಾವೇ ಕುಟುಂಬದ ಬಗ್ಗೆ ಬಹಿರಂಗಪಡಿಸಿದ್ದಾರೆ.

ಮೊದಲ ಪತ್ನಿ ರಾಣಿಯಿಂದ ವಿಚ್ಛೇದನ ಪಡೆದಿರುವ ಮನೋಜ್ ತಿವಾರಿ ಅವರು ಗಾಯಕಿ ಸುರಭಿ ಅವರನ್ನು ವಿವಾಹವಾಗಿದ್ದಾರೆ. ರಾಣಿಯವರಿಂದ ಇದಾಗಲೇ ಇವರಿಗೆ ಒಬ್ಬಳು ಮಗಳಿದ್ದಾಳೆ.

ಎರಡನೇ ಮದುವೆಯ ಕುರಿತು ಸ್ಪಷ್ಟನೆ ನೀಡಿರುವ ಅವರು, ''ಮೊದಲ ಪತ್ನಿಯಿಂದ ಬೇರೆಯಾದ ನಂತರ ಒಂಟಿಯಾಗಿದ್ದೆ. ಈ ಸಮಯದಲ್ಲಿ ಗಾಯಕಿ ಸುರಭಿ ಅವರ ಪರಿಚಯವಾಗಿತ್ತು. ಸುರಭಿ ನನ್ನ ಮೊದಲ ಮಗಳು ಜಿಯಾಳ ಜೊತೆ ಕ್ಲೋಸ್​ ಇದ್ದಾಳೆ. ಆದ್ದರಿಂದ ಜಿಯಾಳೇ ಸುರಭಿಯನ್ನು ವಿವಾಹವಾಗುವಂತೆ ನನಗೆ ಹೇಳಿದ್ದಳು. ಅವಳು ಹೇಳಿದ ನಂತರವಷ್ಟೇ ನಾನು ಲಾಕ್​ಡೌನ್​ ಸಮಯದಲ್ಲಿ ಈಕೆಯನ್ನು ವಿವಾಹವಾದೆ'' ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

03/01/2021 07:19 pm

Cinque Terre

79.94 K

Cinque Terre

7