ಚಿಕ್ಕಮಗಳೂರು: ರಾಜೀನಾಮೆ ಕೊಡಿ ನಾನಿದ್ದೇನೆ ಎಂದು ಸಿದ್ದಾರ್ಥ್ ಅಣ್ಣ ಹೇಳಿದ್ದರು. ನನಗೆ ಧೈರ್ಯ ತುಂಬಿದ್ದರು. ನಾನು ಐಪಿಎಸ್ ಹುದ್ದೆಗೆ ರಾಜೀನಾಮೆ ಕೊಡುವ ಬಗ್ಗೆ ಇಬ್ಬರೂ ಸೇರಿ ನಿರ್ಧಾರ ಮಾಡಿದ್ದೆವು. ಪದೋನ್ನತಿ ಹೊಂದಿ ಡಿಐಜಿ, ಐಜಿ ಆಗಿ ಎಸಿ ಚೇಂಬರ್ ನಲ್ಲಿ ಕೂತು ಕೆಲಸ ಮಾಡಲು ಆಸಕ್ತಿ ಇಲ್ಲ ಎಂದಾಗ ಸಿದ್ದಾರ್ಥ್ ಅಣ್ಣ ಈ ಸಲಹೆ ಕೊಟ್ಟಿದ್ದರು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ದಿ. ಸಿದ್ದಾರ್ಥ್ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ಕಾಫಿ ಡೇ ಮಾಲೀಕ ದಿವಂಗತ ಸಿದ್ದಾರ್ಥ್ ಹೆಗ್ಡೆ ಅವರ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಬಂದಿದ್ದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜೀನಾಮೆ ಬಗ್ಗೆ ಸಿದ್ದಾರ್ಥ್ ಅಣ್ಣನೊಂದಿಗೆ ಮೂರುವರೆ ಗಂಟೆ ಮಾತನಾಡಿದ್ದೆ ಎಂದರು.
ಇಬ್ಬರು ಬಂದು ಕಾರ್ ಡೋರ್ ತೆರೆಯುತ್ತಾರೆ. ನಾಲ್ವರು ಬಂದು ಸೆಲ್ಯೂಟ್ ಮಾಡ್ತಾರೆ. ಆಮೇಲೆ ಪ್ರಮೋಷನ್ ಇದೆಲ್ಲ ನನಗೆ ಇಷ್ಟ ಇಲ್ಲ. ಹಳ್ಳಿಗೆ ಹೋಗಬೇಕು. ಕೃಷಿ ಮಾಡಬೇಕು. ಸಾಮಾನ್ಯನಂತೆ ಬದುಕಿ ಸಾಮಾನ್ಯರ ಬದುಕನ್ನು ಬದಲಾವಣೆ ಮಾಡಬೇಕೆಂಬ ಆಸೆ ಇದೆ ಸರ್ ಎಂದು ಸಿದ್ದಾರ್ಥ್ ಅಣ್ಣನಿಗೆ ಹೇಳಿದ್ದೆ. ಆಗ ಈ ವಿಚಾರದಲ್ಲಿ ಅವರೇ ನನಗೆ ಧೈರ್ಯ ತುಂಬಿದ್ದರು ಎಂದು ಸಿದ್ದಾರ್ಥ್ ಹೆಗ್ಡೆ ಅವರನ್ನು ಅಣ್ಣಾಮಲೈ ನೆನಪಿಸಿಕೊಂಡರು.
PublicNext
02/01/2021 07:57 am