ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಜವಾಗ್ಲೂ ಕಾಳಜಿ ಇದ್ರೆ ದಂಡ ಹಾಕದೇ ಮಾಸ್ಕ್ ವಿತರಿಸಿ: ಮಹದೇವಪ್ಪ

ಮೈಸೂರು: ಜನಸಾಮಾನ್ಯರ ಮೇಲೆ ನಿಜಕ್ಕೂ ಕಾಳಜಿ ಇದ್ದರೆ ದಂಡ ಸಂಗ್ರಹಿಸುವ ಬದಲಾಗಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್‌ ವಿತರಿಸಿ ಎಂದು ಮಾಜಿ ಸಚಿವ ಡಾ.ಎಚ್‌.ಸಿ ಮಹದೇವಪ್ಪ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಮೂಲಕ ಮಾಸ್ಕ್‌ ಧರಿಸಿಲ್ಲವೆಂದು ಪೊಲೀಸರು ಕೂಲಿ ಕಾರ್ಮಿಕ ಮಹಿಳೆಯ ಬಳಿ ದಂಡ ವಸೂಲಿ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಮಾಸ್ಕ್ ಧರಿಸದ ಕಾರಣಕ್ಕೆ ಜನ ಸಾಮಾನ್ಯರನ್ನು, ಕೂಲಿ ಕಾರ್ಮಿಕರನ್ನು ಪೀಡಿಸುತ್ತಿರುವ ರಾಜ್ಯ ಸರಕಾರಕ್ಕೆ ನಾಚಿಕೆಯಾಗಬೇಕು. ಬಡವರ ಶ್ರಮದ ಮಹತ್ವ ಅರಿಯದೇ ದುರಹಂಕಾರದಿಂದ ವರ್ತಿಸುವ ಪ್ರಭುತ್ವದ ಈ ಕ್ರೌರ್ಯ ನಿಲ್ಲಲಿ. ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ದಂಡ ಸಂಗ್ರಹಿಸುವ ಜಾಗದಲ್ಲಿ ಉಚಿತವಾಗಿ ಮಾಸ್ಕ್ ವಿತರಿಸಲಿ ಎಂದು ಕಿಡಿಕಾರಿದ್ದಾರೆ.

Edited By : Nagaraj Tulugeri
PublicNext

PublicNext

31/12/2020 04:31 pm

Cinque Terre

84.27 K

Cinque Terre

7

ಸಂಬಂಧಿತ ಸುದ್ದಿ