ಬೆಳಗಾವಿ- ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಈ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗಾಗಿ ಯುವಜನರು ಗೋವಾದತ್ತ ಪ್ರಯಾಣ ಬೆಳೆಸುತ್ತಿದ್ದಾರೆ.
ರಾಜ್ಯ ಹಾಗೂ ಹೊರರಾಜ್ಯದ ಯುವಕರ ದಂಡು ಗೋವಾದತ್ತ ಮುಖ ಮಾಡಿದೆ. ಕಲ್ಯಾಣ ಕರ್ನಾಟಕ ಭಾಗ, ಹಾಗೂ ಆಂಧ್ರ, ತೆಲಂಗಾಣ ಮೂಲದಿಂದ ಬಂದ ಖಾಸಗೀ ಬಸ್ ಕಾರುಗಳು ಬೆಳಗಾವಿ ಮಾರ್ಗವಾಗಿ ಗೋವಾದ ಕಡೆಗೆ ಪ್ರಯಾಣ ಬೆಳೆಸುತ್ತಿವೆ.
ಬೀಚ್, ಕ್ಯಾಸಿನೋಗಳು, ಹೊಟೇಲ್, ಹಾಗೂ ರೆಸಾರ್ಟ್ ಗಳು ಈಗಾಗಲೇ ಬುಕ್ ಆಗಿವೆ. ಸಂಭ್ರಮಾಚರಣೆ ಬಗ್ಗೆ ಮಾಹಿತಿ ನೀಡಿದ ಗೋವಾ ಸಿಎಂ ಪ್ರಮೋದ್ ಮಹಾಜನ್ ಇಂದು ಸಂಜೆ ಗೋವಾದಲ್ಲಿ 45 ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದಿದ್ದಾರೆ.
PublicNext
31/12/2020 02:34 pm