ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರದ 3 ಕೃಷಿ ಕಾನೂನು ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ- ಬಿಜೆಪಿ ಶಾಸಕರಿಂದ ಬೆಂಬಲ

ತಿರುವನಂತಪುರಂ: ಕೇರಳ ವಿಧಾನಸಭೆ ಎಲ್‌ಡಿಎಫ್ ಮತ್ತು ಯುಡಿಎಫ್ ಶಾಸಕರ ಬೆಂಬಲದೊಂದಿಗೆ ಗುರುವಾರ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ.

ರೈತರ ಸಮಸ್ಯೆ ಕುರಿತು ಚರ್ಚಿಸಲು ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಾನೂನುಗಳ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿದ್ದರು. ಈ ವೇಳೆ ಬಿಜೆಪಿಯ ಏಕೈಕ ಶಾಸಕ ತಮ್ಮ ಬೆಂಬಲ ನೀಡಿರುವುದು ಅಚ್ಚರಿಯ ವಿಚಾರವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ರಾಜಗೋಪಾಲ್, "ಚರ್ಚೆಯ ಸಮಯದಲ್ಲಿ ನಾನು ನಿರ್ಣಯದ ಬಗ್ಗೆ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದೆ. ಆದರೆ ಸದನದಲ್ಲಿ ಜನಪ್ರಿಯ ಭಾವನೆಯು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಬೇಕಾಗಿತ್ತು. ಹೀಗಾಗಿ ನಾನು ನಿರ್ಣಯವನ್ನು ಆಕ್ಷೇಪಿಸಲಿಲ್ಲ. ಜನಪ್ರಿಯ ಭಾವನೆ ಮತ್ತು ಸಾಮಾನ್ಯ ಒಮ್ಮತದೊಂದಿಗೆ ನಿಂತಿದ್ದೇನೆ" ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

31/12/2020 02:33 pm

Cinque Terre

40.45 K

Cinque Terre

2

ಸಂಬಂಧಿತ ಸುದ್ದಿ