ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: ಅತ್ತೆ ವಿರುದ್ಧ 3 ಮತಗಳಿಂದ ಗೆದ್ದ ಸೊಸೆ

ಚಾಮರಾಜನಗರ: ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶದ ವಿಚಾರದಲ್ಲಿ ಅನೇಕ ವಿಶೇಷ ಗೆಲುವುಗಳು ವರದಿಯಾಗಿವೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಅತ್ತೆ-ಸೊಸೆ ಗೆದ್ದು ಗ್ರಾಮ ಪಂಚಾಯಿತಿ ಪ್ರವೇಶ ಮಾಡಿದ್ದಾರೆ. ಆದರೆ ಚಾಮರಾಜನಗರ ತಾಲೂಕಿನಲ್ಲಿ ಅತ್ತೆಯ ವಿರುದ್ಧವೇ ಸೊಸೆ ರೋಚಕ ಜಯ ದಾಖಲಿಸಿದ್ದಾರೆ.

ಹೊಂಗನೂರು ಗ್ರಾಮ ಪಂಚಾಯಿತಿಯ ಹೊಂಗನೂರು 3ನೇ ಬ್ಲಾಕ್ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪುಟ್ಟಬಸಮ್ಮ ಸ್ಪರ್ಧಿಸಿದ್ದರು. ಕಾಂಗ್ರೆಸ್ ಬೆಂಬಲಿತರಾಗಿ ಪುಟ್ಟಬಸಮ್ಮರ ಸೊಸೆ (ಮಗನ ಪತ್ನಿ) ಚೈತ್ರಾ ಸ್ಪರ್ಧೆಗಿಳಿದಿದ್ದರು. ಬುಧವಾರದ ಮತ ಎಣಿಕೆಯಲ್ಲಿ ಪುಟ್ಟಬಸಮ್ಮ ಅವರಿಗೆ 75 ಮತಗಳು, ಚೈತ್ರಾ ಅವರಿಗೆ 78 ಮತಗಳು ದೊರೆತವು. ಈ ಮೂಲಕ 3 ಮತಗಳ ಅಂತರದಿಂದ ಸೊಸೆ ಗೆಲುವು ಸಾಧಿಸಿದ್ದಾರೆ.

Edited By : Vijay Kumar
PublicNext

PublicNext

31/12/2020 08:37 am

Cinque Terre

74.91 K

Cinque Terre

2

ಸಂಬಂಧಿತ ಸುದ್ದಿ