ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾ.ಪಂ.ಚುನಾವಣೆ : 26 ವರ್ಷದ ಬಳಿಕ ಮತದಾನ, ಮಂಗಳಮುಖಿ ಭರ್ಜರಿ ಗೆಲುವು

ಹೊಸಪೇಟೆ : ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆದ ಗ್ರಾ.ಪಂ.ಚುನಾವಣೆಯ ಫಲಿತಾಂಶ ಇಂದು ವೈರಲ್ ಆಗಿದೆ.

ಈ ಬಾರಿಮತದಾರರು ಮಂಗಳಮುಖಿಗೂ ಮನ್ನಣೆ ನೀಡಿದ್ದಾರೆ.

ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯ ರಾಜಾಪುರದ ಕ್ಷೇತ್ರದಿಂದ ಮಂಗಳಮುಖಿ ಸುಧಾ ಎಂಬುವವರು ಗೆಲುವಿನ ನಗೆ ಬೀರಿದ್ದಾರೆ.

ಕಲ್ಲಹಳ್ಳಿ ಗ್ರಾಪಂ ಸ್ಥಾಪನೆಯಾಗಿ 26 ವರ್ಷ ಆಗಿದೆ. ಆಗಿನಿಂದಲೂ ಈ ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯೇ ನಡೆದಿತ್ತು.

ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಮಂಗಳಮುಖಿ ಸುಧಾ ಜಯ ಗಳಿಸಿದ್ದಾರೆ.

Edited By : Nirmala Aralikatti
PublicNext

PublicNext

30/12/2020 02:21 pm

Cinque Terre

130.94 K

Cinque Terre

14

ಸಂಬಂಧಿತ ಸುದ್ದಿ