ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾ.ಪಂ ಚುನಾವಣೆ : ಮೈಸೂರಿನಲ್ಲಿ ಮತ ಎಣಿಕೆ ವೇಳೆ ಹೃದಯಾಘಾತದಿಂದ ಚುನಾವಣಾಧಿಕಾರಿ ಸಾವು

ಮೈಸೂರು : ಕರ್ನಾಟಕದಲ್ಲಿ ಎರಡು ಹಂತದಲ್ಲಿ ಒಟ್ಟು 5728 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, ಇಂದು ಫಲಿತಾಂಶಗಳು ಹೋರ ಬೀಳುತ್ತಿವೆ.

ಚುನಾವಣೆ ಮತ್ತು ಫಲಿತಾಂಶದ ಸಮಯದಲ್ಲಿ ಚುನಾವಣಾ ಅಧಿಕಾರಗಳಿಗೆ ಒತ್ತಡ ಇರುವುದು ಸಾಮಾನ್ಯ. ಆದರೆ, ಇದೇ ಒತ್ತಡದಿಂದ ಮೈಸೂರಿನಲ್ಲಿ ಕರ್ತವ್ಯನಿರತ ಚುನಾವಣಾ ಅಧಿಕಾರಿಯೊಬ್ಬರು ಇಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಮೈಸೂರಿನ ಪಿರಿಯಾಪಟ್ಟಣದ ಪುಷ್ಪ ಕಾನ್ವೆಂಟ್ ಮತ ಎಣಿಕಾ ಕೇಂದ್ರದಲ್ಲಿ ಘಟನೆ ನಡೆದಿದ್ದು, ಮೃತ ಅಧಿಕಾರಿಯನ್ನು ಬೋರೇಗೌಡ (52) ಎಂದು ಗುರುತಿಸಲಾಗಿದೆ.

ಮತ ಎಣಿಕೆ ಆರಂಭವಾಗಿ ಸ್ವಲ್ಪ ಹೊತ್ತಿನಲ್ಲೇ ಅವರು ಅಸ್ವಸ್ಥರಾಗಿದ್ದಾರೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Edited By : Nirmala Aralikatti
PublicNext

PublicNext

30/12/2020 12:38 pm

Cinque Terre

102.94 K

Cinque Terre

2

ಸಂಬಂಧಿತ ಸುದ್ದಿ