ವಿಜಯಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಅರೆಹುಚ್ಚ, ಬಫೂನ್. ಆತ ರಾಜಕಾರಣಕ್ಕೆ ಅಲ್ಲ, ಪಾರ್ಲಿಮೆಂಟಿನ ಮುಂದೆ ನಿಂತಿರುವ ಕಾರು ಕಾಯಲೂ ಲಾಯಕ್ಕಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್‌ನಲ್ಲಿ ಧರ್ಮೇಗೌಡರನ್ನು ಎಳೆದಾಡಿದ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರನ್ನು ಸಿದ್ದರಾಮಯ್ಯ ಸಮರ್ಥಿಸಿದ ಬಗೆಯನ್ನು ಅವರು ತರಾಟೆಗೆ ತೆಗೆದುಕೊಂಡರು. ''ಸಿದ್ದರಾಮಯ್ಯ ಯಾಕೋ ಹಾದಿ ಬಿಟ್ಟಿದ್ದಾರೆ. ನಾನು ಗೋಮಾಂಸ ತಿನ್ನುತ್ತೇನೆ. ನನ್ನನ್ನು ಕೇಳುವವರು ಯಾರು ಎಂಬ ಮನಸ್ಥಿತಿ ಹೊಂದಿದ್ದಾರೆ. ಹಿಂದೂಗಳಿಗೆ ಅವಮಾನ ಮಾಡಿದರೆ ನಿಮಗೆ ಓಟುಗಳು ಬರುತ್ತವಾ? ಆಯ್ತು, ಮುಂದಿನ ಚುನಾವಣೆಯಲ್ಲಿ ನೋಡೋಣ. ಹಿಂದೂಗಳ ಮತವಿಲ್ಲದೇ ಹೇಗೆ ಆಯ್ಕೆಯಾಗ್ತೀರಿ ನೋಡೋಣ'' ಎಂದು ಚಾಟಿ ಬೀಸಿದ್ದಾರೆ.
PublicNext
29/12/2020 11:29 pm