ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮೇಗೌಡರ ಸಾವು ಆತ್ಮಹತ್ಯೆಯಲ್ಲ.. ರಾಜಕೀಯ ಕೊಲೆ : ಹೆಚ್ ಡಿಕೆ

ಬೆಂಗಳೂರು: ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡರ ಸಾವಿನ ಹಿನ್ನೆಲೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾವುಕರಾಗಿದ್ದಾರೆ.

ಇಂದಿನ ಧರ್ಮಣ್ಣನ ಘಟನೆಯನ್ನ ನಾನು ಆತ್ಮಹತ್ಯೆ ಅನ್ನಲ್ಲ. ಇದು ಇಂದಿನ ರಾಜಕಾರಣದ ಕೊಲೆ ಎಂದರು.

ನನ್ನ ಜೀವನದ ಅತ್ಯಂತ ಮರೆಯಲು ಆಗದ ದುರಂತ ದಿನ ಇದು.

ಹಲವಾರು ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ಧರ್ಮಣ್ಣನ ಸಾವು ಆತ್ಮಹತ್ಯೆಯಲ್ಲ ರಾಜಕೀಯದ ಕೊಲೆ ಈ ಘಟನೆ ಸಹಿಸಿಕೊಳ್ಳಲು ಸಾಧ್ಯ ಇಲ್ಲ. ನನ್ನ ಕುಟುಂಬದ ಒಡಹುಟ್ಟಿದವನ ಮರಣವಿದು.

ಅವರ ತಂದೆ 2004ರಲ್ಲಿ ಬೀರೂರಿನಿಂದ ಆಯ್ಕೆ ಆಗಿದ್ರು. ನಾನು ಸಾಯುವ ಮುನ್ನ ನನ್ನ ಮಗ ಮಂತ್ರಿ ಆಗಬೇಕು ಎಂದು ಅವರು ಕನಸು ಕಂಡಿದ್ರು.

ಅದನ್ನು ನನಸಾಗಿಸಲು ಉಪಸಭಾಪತಿಯಾದ್ರು ಮಾಡೋಣ ಅಂತ ಮಾಡಿದೆ. ಉಪ ಸಭಾಪತಿ ಮಾಡಿದ್ದೆ ತಪ್ಪಾಯ್ತೇನೊ ಎಂಬ ಭಾವ ನನ್ನನ್ನೀಗ ಕಾಡತೊಡಗಿದೆ.

ಅವತ್ತು ಈ ಇಬ್ಬರು ಅಣ್ಣ ತಮ್ಮಂದಿರನ್ನು ಕಾಂಗ್ರೆಸ್ ಗೆ ಕರೆಸಿಕೊಳ್ಳಲು ಪ್ರಯತ್ನ ಮಾಡಿದ್ರು. ಆದರೆ, ಅವರು ಕಾಂಗ್ರೆಸ್ಗೆ ಹೋಗಲ್ಲ ಅಂದ್ರು.

ಆವತ್ತು ಕುಮಾರಣ್ಣ ಬೇಕಾ, ಎಂಎಲ್ ಎ ಸ್ಥಾನ ಬೇಕಾ ಎಂದು ಸಹೋದರರನ್ನು ಕೇಳಿದ್ದೆ. ಅದಕ್ಕೆ ಅವರು ಉಳಿದುಕೊಂಡಿದ್ರು. ಅವರ ತಂದೆ ಮಾತು ಉಳಿಸಿಕೊಳ್ಳಲು, ಉಪಸಭಾಪತಿಯನ್ನಾದ್ರೂ ಮಾಡಿ ಬಿಡೋಣ ಅಂತ ಮಾಡಿದೆ.

ಹೀಗಾಗುತ್ತೆ ಅಂತ ಗೊತ್ತಿರಲಿಲ್ಲ.

ಆ ಮನುಷ್ಯ ಇವತ್ತು ಆತ್ಮಹತ್ಯೆ ಮಾಡಿಕೊಂಡಿಲ್ಲ. ನಮ್ಮ ರಾಜಕೀಯದ ತೆವಲಿಗೆ ಇಂತವರ ಕೊಲೆ ಆಗ್ತಿದೆ ಎಂದಿದ್ದಾರೆ.

Edited By : Nirmala Aralikatti
PublicNext

PublicNext

29/12/2020 12:02 pm

Cinque Terre

91.8 K

Cinque Terre

7

ಸಂಬಂಧಿತ ಸುದ್ದಿ