ಬೆಂಗಳೂರು: ಗೋ ಹತ್ಯೆ ನಿಷೇಧ ಕುರಿತು ಮಹತ್ವದ ಚರ್ಚೆಗಳು ನಡೆಯುತ್ತಿವೆ.
ರಾಜಕೀಯ ನಾಯಕರುಗಳು ಗೋವುಗಳಿಗೆ ಪೂಜೆ ಸಲ್ಲಿಸುವ ಪ್ರವೃತ್ತಿ ರೂಢಿಸಿಕೊಂಡಿರುವುದರ ಮಧ್ಯೆ ರಾಜಕೀಯ ದಿಗ್ಗಜ ಸಿದ್ದರಾಮಯ್ಯ ನಾನು ದನದ ಮಾಂಸ ತಿನ್ನುತ್ತೇನೆ ನನ್ನ ಆಹಾರ ನನ್ನ ಹಕ್ಕು ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಈ ಮಾತನ್ನು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.
ನಿನ್ನೆ (ಡಿ. 27) ಹನುಮ ಜಯಂತಿಯಂದು ಮೈಸೂರಿನಲ್ಲಿ ಸ್ನೇಹಿತನ ಮನೆಗೆ ಹೋಗಿ ಬಾಡೂಟ ಸವಿದಿದ್ದ ಸಿದ್ದು, ಇಂದು ಬೆಂಗಳೂರಿನಲ್ಲಿ ನಾನು ದನದ ಮಾಂಸ ತಿನ್ನುತ್ತೇನೆ ಎಂದು ಹೇಳಿದ್ದಾರೆ.
ನಾನು ದನದ ಮಾಂಸವನ್ನು ತಿನ್ನುತ್ತೇನೆ. ಆಹಾರ ಪದ್ಧತಿ ನನ್ನ ಹಕ್ಕು. ಅದನ್ನ ಕೇಳುವುದಕ್ಕೆ ನೀನ್ಯಾರು? ಎಂದು ಅಧಿವೇಶನದಲ್ಲಿಯೇ ನಾನು ಕೇಳಿದ್ದೇನೆ.
ನಮ್ಮವರು ಇದನ್ನು ಗಟ್ಟಿಯಾಗಿ ಹೇಳಲ್ಲ. ಕೆಲ ವಿಚಾರಗಳ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು ಎಂದಿದ್ದಾರೆ.
ಗೋವನ್ನು ನಾವು ಪೂಜಿಸುತ್ತೇವೆ ಎಂಬುದು ಸರಿ. ಆದರೆ ವಯಸ್ಸಾದ ಹಸು, ಗಂಡು ಕರು ಏನ್ ಮಾಡೋದು ಹೇಳಿ? ಕಾಂಗ್ರೆಸ್ ನವರು ಕೂಡ ಈ ವಿಚಾರದ ಬಗ್ಗೆ ಹೇಳಬೇಕು.
ಬೇರೆ ಜಾತಿಯವರು ಏನೋ ಅನ್ಕೊಳ್ತಾರೆಂದು ಸುಮ್ಮನಾಗ್ತಾರೆ. ಮೌನಕ್ಕೆ ಶರಣಾಗುವುದನ್ನು ಬಿಡಬೇಕು.
ನಮ್ಮ ಸಿದ್ಧಾಂತವನ್ನ ನಾವು ಹೇಳಬೇಕು ಎಂದು ಸಿದ್ದರಾಮಯ್ಯ ಇತರರಿಗೆ ತಿಳಿಸಿದ್ದಾರೆ.
PublicNext
28/12/2020 03:39 pm