ಚಿಕ್ಕಮಗಳೂರು: ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರೋ ಕಾರಣಕ್ಕೆ ದೇವರ ಹೆಸರಿಟ್ಟರು ಆದರೆ ಅವರು ಸಹವಾಸ ದೋಷದಿಂದ ಕೆಟ್ಟಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿ ಟಿ ರವಿ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹನುಮ ಹುಟ್ಟಿದ್ದು ಗೊತ್ತಾ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಅವರ ಮೇಲೆ ವಾಕ್ ಪ್ರಹಾರ ನಡೆಸಿದರು.
ಇವರೇ ನಿನ್ನ ತಂದೆ ಎಂದು ತಾಯಿ ಹೇಳಿದರೆ ಯಾರೂ ಸಾಕ್ಷಿ ಕೇಳೋದಿಲ್ಲ. ಕೆಲವರು ಸಾಕ್ಷಿ ಕೇಳುವ ಮನಸ್ಥಿತಿಯ ಜನರು ಇರ್ತಾರೆ. ಸಿದ್ದರಾಮಯ್ಯ ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅದು ಅವರ ಸಹವಾಸ ದೋಷ ಎಂದು ಸಿ. ಟಿ ರವಿ ವಾಗ್ದಾಳಿ ನಡೆಸಿದರು.
PublicNext
28/12/2020 03:23 pm