ನವದೆಹಲಿ: ಈ ವರ್ಷದ ಕೊನೆಯ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿಯವರು ಕರ್ನಾಟಕದ ಬಗ್ಗೆ ಈ ಕನ್ನಡಿಗರ ಬಗ್ಗೆ ಮುಕ್ತ ಕಂಠದಲ್ಲಿ ಮಾತನಾಡಿದ್ದಾರೆ. ಕರ್ನಾಟಕದ ಶ್ರೀರಂಗಪಟ್ಟದಲ್ಲಿರುವ ವೀರಭದ್ರ ಸ್ವಾಮಿ ದೇವಸ್ಥಾನ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ಕಾಯಕವನ್ನ ಪ್ರಶಂಸಿದ್ದಾರೆ. ಇನ್ನು ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಕರ್ನಾಟಕದ ಯುವ ದಂಪತಿಗಳಾದ ಅನುದೀಪ್ ಹಾಗೂ ಮಿನೀಶಾ ಕಾರ್ಯವನ್ನ ಮೋದಿ ಶ್ಲಾಘಿಸಿದ್ದಾರೆ.
' ಸಾವಿರ ವರ್ಷಕ್ಕಿಂತ ಹಳೆಯ ಶ್ರೀರಂಗ ಪಟ್ಟಣದ ವೀರಭದ್ರ ಸ್ವಾಮಿ ದೇವಸ್ಥಾನದ ಹಾಳು ಕೊಂಪೆಯಾಗಿ ಬಿದ್ದಿತ್ತು. ಈ ದೇವಸ್ಥಾನವನ್ನ ಯುವಬ್ರಿಗೇಡ್‌ನ ಉತ್ಸಾಹಿ ಯುವಕರ ತಂಡ ಜೀರ್ಣೋದ್ದಾರ ಮಾಡಿದ್ದು, ಕರ್ನಾಟಕದಲ್ಲಿರುವ ಯುವ ಬ್ರಿಗೇಡ್ ಮಾಡಿದ ಅತ್ಯಂತ ಉತ್ತಮ ಸಾಮಾಜಿಕ ಕೆಲಸಗಳನ್ನ ಮಾಡ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಪೋಸ್ಟ್ ಮಾಡಿದ ಯುವ ಬ್ರಿಗೇಡ್, ಇಲ್ಲಿ ಸ್ವಚ್ಚತಾ ಕಾರ್ಯಗಳನ್ನ ಮಾಡಿದ್ದು, ದೇಸ್ಥಾನವನ್ನ ಸಂಪೂರ್ಣವಾಗಿ ಜೀರ್ಣೋದ್ದಾರ ಮಾಡಿದೆ. ಈ ಮೂಲಕ ಭಾರತದ ಭವ್ಯ ಪರಂಪರೆಯನ್ನು ಮತ್ತೆ ಸ್ಥಾಪಿಸುವಲ್ಲಿ ಯುವ ಬ್ರಿಗೇಡ್ ಮಹತ್ವದ ಕಾರ್ಯವಹಿಸಿದೆ' ಎಂದು ಮೋದಿ ಹೇಳಿದ್ದಾರೆ.
ಇನ್ನು ಕರ್ನಾ ಅನುದೀಪ್ ಹಾಗಾ ಮಿನೀಶಾ ದಂಪತಿ ಬಗ್ಗೆ ಮಾತನಾಡಿದ ಮೋದಿ, 'ಇತ್ತೀಚೆಗೆ ಮದುವೆಯಾಗಿದ್ದಾರೆ. ಮದುವೆಯಾದ ಬಳಿಕ ಎಲ್ಲರೂ ಪ್ರಯಾಣ ಮಾಡುತ್ತಾರೆ. ಆದರೆ ಈ ದಂಪತಿ ಮದುವೆಯಾದ ಬೆನ್ನಲ್ಲೇ ಒಂದು ಸಂಕಲ್ಪ ಮಾಡಿದ್ದಾರೆ. ನಮ್ಮ ಪರಿಸರ ಸ್ವಚ್ಚಗೊಳಿಸಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಮದುವೆಯಾದ ಬಳಿಕ ಭಾರತದ ಹಲವೆಡೆ ಪ್ರಯಾಣಿಸಿದ ಅನುದೀಪ್ ಹಾಗೂ ಮಿನೀಶಾ ಪ್ರವಾಸಿ ತಾಣಗಳಲ್ಲಿ ಸ್ವಚ್ಚತಾ ಕಾರ್ಯ ಮಾಡಿದ್ದಾರೆ. ಕರ್ನಾಟಕದ ಸೋಮೇಶ್ವರ ಸಮುದ್ರ ಕಿನಾರೆಯನ್ನು ಸಂಪೂರ್ಣ ಸ್ವಚ್ಚಗೊಳಿಸಿದ ಹೆಗ್ಗಳಿಗೆ ಅನುದೀಪ್ ಹಾಗೂ ಮಿನೀಶಾಗೆ ಸಲ್ಲಿಸಲಿದೆ' ಎಂದು ಮೋದಿ ಹೇಳಿದ್ದಾರೆ.
PublicNext
27/12/2020 01:37 pm