ಅಮೆಥಿ: ಕಾರ್ಯಕರ್ತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸದಿದ್ದರೆ, ರಾಯಬರೇಲಿ ಕ್ಷೇತ್ರವನ್ನೂ ಗಾಂಧಿ ಪರಿವಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಸೋತ ಬಳಿಕ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುವುದು ಹೆಚ್ಚಾಗಿದೆ. ಹೀಗೆ ಮುಂದುವರೆದರೆ ಗಾಂದಿ ಪರಿವಾರದಿಂಧ ರಾಯ್‌ಬರೇಲಿ ಕ್ಷೇತ್ರವನ್ನೂ ನಾವು ಕಸಿದುಕೊಳ್ಳಬೇಕಾಗುತ್ತದೆ ಎಂದು ಸ್ಮೃತಿ ಇರಾನಿ ಎಚ್ಚರಿಸಿದರು. ಗೂಂಡಾಗಳ ಗೊಡ್ಡು ಬೆದರಿಕೆಗಳಿಗೆ ಬಿಜೆಪಿ ಕಾರ್ಯಕರ್ತರೂ ಹೆದರುವುದೂ ಇಲ್ಲ ಎಂದು ಸ್ಮೃತಿ ಇರಾನಿ ಈ ವೇಳೆ ಹೇಳಿದರು.
PublicNext
27/12/2020 11:34 am