ಅಕ್ರಮ ಹಣ ವರ್ಗಾವಣೆ ಕೇಸ್‍ನಲ್ಲಿ ಪಿಎಫ್‍ಐ ಸಂಘಟನೆ ವಿರುದ್ಧ ಇಡಿ ಅಧಿಕಾರಿಗಳು ತನಿಖೆ ಮಾಡಿದ್ರೆ ಸಂಸದರು, ರಾಜ್ಯಾಧ್ಯಕ್ಷರ ಕಚೇರಿ ಮೇಲೆ ಮುತ್ತಿಗೆ ಹಾಕುವುದಕ್ಕೆ ಅವಕಾಶ ನೀಡಬೇಕೆ..? ಬಾಲ ಬಿಚ್ಚಿ ಮೆರೆಯುವ ಕಾಲ ಈಗ ಇಲ್ಲ. ಬಾಲ ಬಿಚ್ಚಿ ಮೆರೆಯಲು ಹೊರಟರೇ ಬಾಲವನ್ನೂ ಕಟ್ ಮಾಡುತ್ತೇವೆ, ತಲೆನೂ ಕಟ್ ಮಾಡುತ್ತೇವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಚೇರಿ ಮೇಲೆ ಪಿಎಫ್‍ಐ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಇಡಿ ತನಿಖೆ ಮಾಡಬಾರದು ಅಂತಾ ಹೇಳುವುದಕ್ಕೆ ಅವರಿಗೆ ಏನು ಅಧಿಕಾರವಿದೆ. ಅಕ್ರಮ ಹಣ ಚಲಾವಣೆ ಮಾಡುವುದಕ್ಕೆ ಬರುತ್ತೆ, ಇಡಿ ತನಿಖೆ ಮಾಡಬಾರದಾ? ಎಂದು ಪ್ರಶ್ನಿಸಿದರು. ನೂರಾರು ಕೋಟಿ ಅಕ್ರಮ ಹಣ ಸಿಎಎ ವಿರೋಧಿಸಿ ಪ್ರತಿಭಟನೆ ಮಾಡಲು ದೇಶ ವಿದೇಶದಿಂದ ಬಂದಿದೆ ಎನ್ನುವ ಮಾಹಿತಿ ಮೇಲೆ ಅಕ್ರಮ ಹಣದ ವರ್ಗಾವಣೆಯ ಜಾಡು ಹಿಡಿದು ಇಡಿ ತನಿಖೆ ಮಾಡಿದ್ರೆ. ಕುಂಬಳಕಾಯಿ ಕಳ್ಳ ಎಂದ್ರೆ ಹೆಗಲು ಮುಟ್ಟಿ ನೋಡಿಕೊಂಡ ಎನ್ನುವಂತೆ ಪಿಎಫ್‍ಐ ಯಾಕೆ ವರ್ತಿಸುತ್ತಿದೆ ಎಂದು ಕಿಡಿಕಾರಿದರು.
PublicNext
26/12/2020 06:51 pm