ಬೆಂಗಳೂರು: ಸಿಲಿಕಾನ್ ಸಿಟಿಯ ಜನ ವನ್ಯಜೀವಿಗಳನ್ನ ನೋಡಲು ಇನ್ಮುಂದೆ ಚಾಮರಾಜನಗರದ ಬಂಡೀಪುರ, ನಾಗರಹೊಳೆ, ಭದ್ರಾ ಅಥವಾ ಮೈಸೂರಿಗೆ ಹೋಗಬೇಕೆಂದೇನಿಲ್ಲ. ಈಗ ಬೆಂಗಳೂರು ಹೊರವಲಯದಲ್ಲೇ ಜಂಗಲ್ ಸಫಾರಿ ಅನುಭವ ಆಗಲಿದೆ. ಸ್ವತಂತ್ರವಾಗಿ ಕಾಡಿನಲ್ಲಿ ಓಡಾಡಿಕೊಂಡಿರುವ ಪ್ರಾಣಿಗಳನ್ನ ನೋಡಬಹುದಾಗಿದೆ.
ಜಂಗಲ್ ಲಾಡ್ಜಸ್- ರೆಸಾರ್ಟ್ಸ್ (ಜೆಎಲ್ ಆರ್) ನ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿರ್ಸಾ ದೀರ್ಘಾವಧಿಯಿಂದ ನನೆಗುದಿಗೆ ಬಿದ್ದಿದ್ದ ಪ್ರಸ್ತಾವನೆಯನ್ನು ಅಂಗೀಕರಿಸಿದ್ದು, ಜೆಎಲ್ ಆರ್ ಪ್ರಾಯೋಗಿಕವಾಗಿ ಸಫಾರಿಯನ್ನು ಜಾರಿಗೆ ತರುತ್ತಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಚಿರತೆ, ಕರಡಿ, ಆನೆ, ಜಿಂಕೆ ಸೇರಿದಂತೆ ಹಲವು ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದ್ದು, ಒಂದೇ ಒಂದು ಗಂಡು ಹುಲಿ ಇದೆ. ಉದ್ಯಾನವನದ 15 ಚದರ ಕಿಲೋಮೀಟರ್ ನಷ್ಟು ಪ್ರದೇಶವನ್ನು ಸಫಾರಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ.
PublicNext
26/12/2020 05:16 pm