ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ರನ ಆ ಮಾತಿಗೆ ರಾಜಕೀಯ ಸನ್ಯಾಸಕ್ಕೆ ಹೆಜ್ಜೆ ಇಟ್ರಾ ದೊಡ್ಡಗೌಡ್ರು?

ಬೆಂಗಳೂರು: ಪುತ್ರ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಒಂದು ಮಾತಿನಿಂದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ರಾಜಕೀಯ ನಿವೃತ್ತಿಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೌದು..ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು, ''ದೇವೇಗೌಡ್ರ ಮಾತು ಕೇಳಿ ಕಾಂಗ್ರೆಸ್ ಸೇರಿ ಕೆಟ್ಟೆ'' ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಮತ್ತೊಂದು ಸಮಯದಲ್ಲಿ ''ಜನವರಿ 15ರಿಂದ ಪಕ್ಷದ ಪುನಶ್ಚೇತನ ಕಾರ್ಯಕ್ರಮ ಆರಂಭವಾಗಲಿದೆ. ಈ ವೇಳೆ ತೆಗೆದುಕೊಳ್ಳುವ ನಿರ್ಧಾರ ನಮಗೆ ತಾತ್ಕಾಲಿಕ ನಷ್ಟವಷ್ಟೇ'' ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಅವರ ಮಾತಿನಿಂದ ಬೇಸರಗೊಂಡಿರುವ ದೇವೇಗೌಡರು ರಾಜಕೀಯ ಸನ್ಯಾಸ ಪಡೆಯಲು ಮುಂದಾದ್ರಾ ಎನ್ನುವ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

Edited By : Vijay Kumar
PublicNext

PublicNext

26/12/2020 03:44 pm

Cinque Terre

60.17 K

Cinque Terre

3

ಸಂಬಂಧಿತ ಸುದ್ದಿ