ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನರ್ ರಚನೆ ಆದರೆ ಮೂವರು ಸಚಿವರಿಗೆ ಕೊಕ್ ನೀಡಲು ಮತ್ತು ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ಮಾಡಿದೆ.
ಸಂಪುಟ ವಿಸ್ತರಣೆಯಾದರೆ ಆರು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ಇದೆ. ಆಗ ಪರಿಷತ್ ಗೆ ಆಯ್ಕೆ ಆಗಿರುವ ಆರ್.ಶಂಕರ್ ಮತ್ತು ಎಂ.ಟಿ.ಬಿ ನಾಗರಾಜ್ ಅವರನ್ನು ಮಂತ್ರಿಗಳನ್ನಾಗಿ ಮಾಡಲೇಬೇಕಾಗುತ್ತದೆ.
ಜೊತೆಗೆ ಪಕ್ಷದ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರಸ್ತಾಪ ಮಾಡಬಹುದು.
ಉಮೇಶ್ ಕತ್ತಿ, ತಪ್ಪಾರೆಡ್ಡಿ, ಯತ್ನಾಳ್ ಮತ್ತು ಮುರುಗೇಶ್ ನಿರಾಣಿ ಪೈಕಿ ಇಬ್ಬರು ಮಂತ್ರಿ ಪಟ್ಟ ಸಿಗುವ ಸಾಧ್ಯತೆಯಿದೆ.
ಒಂದೇ ವೇಳೆ ಸಂಪುಟ ಪುನರ್ ರಚನೆಯಾದಲ್ಲಿ ಹಾಲಿ ಮೂವರು ಸಚಿವರಿಗೆ ಕೊಕ್ ಕೊಡಬೇಕಾಗುತ್ತದೆ.
ಹಾಲಿ ಸಚಿವರಾದ ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ್ ಮತ್ತು ಕೋಟಾ ಶ್ರೀನಿವಾಸ್ ಪೂಜಾರಿ ಕೈ ಬಿಡುವ ಸಾಧ್ಯತೆ ಇದೆ.
ಸೇರ್ಪಡೆಯ ಪಟ್ಟಿಯಲ್ಲಿ ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಸುಳ್ಯದ ಅಂಗಾರ, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಶಂಕರ್, ಎಂ.ಟಿ.ಬಿ.ನಾಗರಾಜ್, ಯೋಗೇಶ್ವರ್ ಇದ್ದಾರೆ.
PublicNext
18/09/2020 02:40 pm