ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಹಿಟ್ಟು ಈಗ ಲೀಟರ್‌ಗೆ 40 ರೂಪಾಯಿ' ಎಂದ ರಾಹುಲ್ ಗಾಂಧಿ; ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್

ಬಾಯ್ತಪ್ಪಿನ ಮಾತುಗಳಿಗೆ ಈಗಾಗಲೇ ಖ್ಯಾತರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಲ್ಲಿಯೂ ಎಡವಟ್ಟು ಮಾಡಿಕೊಂಡಿದ್ದು, ಅವರು ಆಡಿದ ಮಾತುಗಳ ವಿಡಿಯೋ ಶೇರ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದ್ದು, ಇದರ ಅಂಗವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಪ್ರತಿಭಟನೆ ನಡೆದಿದೆ.

ಹಿಟ್ಟಿನ ಬೆಲೆ ಈ ಮೊದಲು ಪ್ರತಿ ಲೀಟರ್ಗೆ 22 ರೂಪಾಯಿಗಳಿದ್ದು, ಈಗ ಅದು 40 ರುಪಾಯಿಗಳಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದು, ಇದಕ್ಕೆ ಟ್ರೋಲ್ ಮಾಡುತ್ತಿರುವ ನೆಟ್ಟಿಗರು ಹಿಟ್ಟನ್ನು ಲೀಟರ್‌ನಲ್ಲಿ ಕೊಡುವುದಿಲ್ಲ. ಈ ಪ್ರಾಥಮಿಕ ಮಾಹಿತಿಯೂ ನಿಮಗೆ ಇಲ್ಲ ಎಂದು ಲೇವಡಿ ಮಾಡುತ್ತಿದ್ದಾರೆ.

Edited By : Abhishek Kamoji
PublicNext

PublicNext

04/09/2022 06:25 pm

Cinque Terre

62.73 K

Cinque Terre

27

ಸಂಬಂಧಿತ ಸುದ್ದಿ