ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸದ್ಯ ಜಾರಿ ನಿರ್ದೇಶನಾಲಯದ ಗಾಳಕ್ಕೆ ಸಿಲುಕಿದ್ದಾರೆ.
ಅನಾರೋಗ್ಯದ ಕಾರಣ ಹೇಳಿ ಹಲವು ಬಾರಿ ಇ.ಡಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ ಸೋನಿಯಾ ಇಂದು ಗುರುವಾರ ವಿಚಾರಣೆಗೆ ಹಾಜರಾಗಿದ್ದಾರೆ.
ಈ ನಡುವೆ ಸೋನಿಯಾ ಗಾಂಧಿ ನೀಡಿದ್ದ ಹಳೆಯ ಹೇಳಿಕೆಯೊಂದರ ವಿಡಿಯೋ ಈಗ ವೈರಲ್ ಆಗುತ್ತಿದೆ. "ನಾನು ಇಂದಿರಾ ಗಾಂಧಿ ಅವರ ಸೊಸೆ. ಯಾವ ಕಾರಣಕ್ಕೂ ಯಾರಿಗೂ ಹೆದರುವವಳಲ್ಲ" ಎಂಬ ಹೇಳಿಕೆ ಇದಾಗಿದೆ.
ಸೋನಿಯಾ ಗಾಂಧಿ ಅವರು ಇಂದು ಇ.ಡಿ ವಿಚಾರಣೆಗೆ ಹಾಜರಾದ ನಂತರದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಹಾಗೂ ವೈರಲ್ ಆಗುತ್ತಿರುವ ಈ ವಿಡಿಯೋಗೆ ನೆಟ್ಟಿಗರಿಂದ ತರಹೇವಾರಿ ಪ್ರತಿಕ್ರಿಯೆ ಹಾಗೂ ಕಾಮೆಂಟ್‌ಗಳು ಬರುತ್ತಿವೆ.
PublicNext
21/07/2022 06:42 pm