ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಪಿ ಸರ್ಕಾರ, ಖಾಕಿ ನಡೆ ಖಂಡಿಸಿ ರಾಜ್ಯ 'ಕೈ' ನಾಯಕರಿಂದ ಪಂಜಿನ ಮೆರವಣಿಗೆ

ಬೆಂಗಳೂರು: ಉತ್ತರ ಪ್ರದೇಶದ ಸರ್ಕಾರ ಹಾಗೂ ಪೊಲೀಸರ ನಡೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಮುಖಂಡರು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಆನಂದ್ ರಾವ್ ವೃತ್ತದ ಬಳಿ ಇವರು ಗಾಂಧಿ ಪ್ರತಿಮೆಯವರೆಗೂ ಪಂಜಿನ ಮೆರವಣಿಗೆ ನಡೆಸಿದೆ.

ಉತ್ತರ ಪ್ರದೇಶದ ಹತ್ರಾಸ್​ ಸಾಮೂಹಿಕ ಅತ್ಯಾಚಾರ​ ಖಂಡಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಇಂದು ಹತ್ರಾಸ್​ಗೆ ತೆರಳಿ ಮೃತ ಯುವತಿಯ ಕುಟುಂಬಸ್ಥರನ್ನು ಭೇಟಿಯಾಗಲು ಮುಂದಾಗಿದ್ದರು. ಆದರೆ ನೊಯ್ಡಾದಲ್ಲೇ ಅವರಿಬ್ಬರ ವಾಹನಗಳನ್ನೂ ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ. ಇನ್ನೂ ಲಾಠಿಚಾರ್ಜ್ ಮತ್ತು ತಳ್ಳಾಟದಿಂದಾಗಿ ರಾಹುಲ್ ಗಾಂಧಿ ಮುಗ್ಗರಿಸಿ ಬಿದ್ದಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.

ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮತ್ತಿತರ ನಾಯಕರು ಇದ್ದರು. ಕಾಂಗ್ರೆಸ್ ಭವನದಿಂದ ಆನಂದರಾವ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆವರೆಗೂ ಪಂಜಿನ ಮೆರವಣಿಗೆ ಹೊರಟ ಕಾಂಗ್ರೆಸ್ ನಾಯಕರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

Edited By : Vijay Kumar
PublicNext

PublicNext

01/10/2020 08:57 pm

Cinque Terre

125 K

Cinque Terre

13

ಸಂಬಂಧಿತ ಸುದ್ದಿ