ಕೋಲ್ಕತಾ: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೋದಿ ಆಡಳಿತದಲ್ಲಿ ದಲಿತರು ಮತ್ತು ಹೆಣ್ಣುಮಕ್ಕಳ ಸುರಕ್ಷತೆ ದೊಡ್ಡ ತಮಾಷೆಯಾಗಿ ಪರಿಣಮಿಸಿದೆ ಎಂದಿದ್ದಾರೆ.
ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ದಲಿತ ಯುವತಿ ಕುಟುಂಬಕ್ಕೆ ಸಂತಾಪ ಸೂಚಿಸಿದ ಮಮತಾ, ಬಿಜೆಪಿ ದೊಡ್ಡ ದೊಡ್ಡ ಭರವಸೆಗಳೊಂದಿಗೆ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಮೋದಿ ಜಿ, ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸುವಲ್ಲಿ ನೀವು ಸಂಪೂರ್ಣ ವಿಫಲವಾಗಿದ್ದು, ಇದು ಪ್ರತಿಯೊಬ್ಬರಿಗೂ ಭವಿಷ್ಯದ ಬಗ್ಗೆ ಭಯವನ್ನುಂಟುಮಾಡುತ್ತದೆ. ನಿಮ್ಮ ಅಬ್ಬರದಿಂದ ನೀವು ರಾಷ್ಟ್ರವನ್ನು ಮರುಳು ಮಾಡಲು ಸಾಧ್ಯವಿಲ್ಲ ಎಂದು ದೀದಿ ಟ್ವೀಟ್ ಮಾಡಿದ್ದಾರೆ.
"ಕಳೆದ ಎರಡು ದಿನಗಳಲ್ಲಿ ಎರಡು ಅಮಾನವೀಯ ಅಪರಾಧಗಳು! ನರೇಂದ್ರ ಮೋದಿ ಆಡಳಿತದಲ್ಲಿ ದಲಿತರ ಮತ್ತು ನಮ್ಮ ಹೆಣ್ಣುಮಕ್ಕಳ ಸುರಕ್ಷತೆ ಈ ದೇಶದಲ್ಲಿ ತಮಾಷೆಯಾಗಿ ಪರಿಣಮಿಸಿದೆ! ಬಿಜೆಪಿ ಸರ್ಕಾರ ದೇಶದ ಪ್ರತಿ ದಲಿತ ಜೀವನಕ್ಕೂ ಬೆದರಿಕೆ ಹಾಕುತ್ತಿದೆ! ಮೋದಿ ಜಿ ದಲಿತರಿಗಾಗಿ ಮಾತನಾಡಿ" ಎಂದು ಮಮತಾ ಬ್ಯಾನರ್ಜಿಟ್ವೀಟ್ ಮಾಡಿದ್ದಾರೆ.
PublicNext
02/10/2020 08:14 am