ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ಮಗನ ವಿರುದ್ಧ ಮಾಧ್ಯಮಗಳು ಅಪಪ್ರಚಾರ ಮಾಡಿದ್ದೇ ಸರ್ಕಾರ ಪತನಕ್ಕೆ ಕಾರಣ : ದೊಡ್ಡ ಗೌಡರ ಆರೋಪ

ನವದೆಹಲಿ : ಸಂವಿಧಾನದ ನಾಲ್ಕನೇ ಅಂಗ ಪತ್ರಿಕಾ ರಂಗ ಒಂದು ಸಮಾಜದ ಏಳ್ಗೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.

ಆದರೆ ನನ್ನ ಮಗ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಮಾಧ್ಯಮಗಳು ನನ್ನ ಮಗ ಕುಮಾರಸ್ವಾಮಿ ಅವರ ವಿರುದ್ಧ ನಿರಂತರವಾದ ಅಪಪ್ರಚಾರದ ಅಭಿಯಾನ ನಡೆಸಿದ್ದವು’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.

‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಮಾಧ್ಯಮಗಳು ಸರ್ಕಾರಕ್ಕೆ ಸಹಕಾರ ನೀಡಿಲ್ಲ.

ಮಾಧ್ಯಮಗಳು ಸರ್ಕಾರದ ವಿರುದ್ಧವೇ ಅಭಿಯಾನ ನಡೆಸಿದವು. ಅವರು ಎಚ್.ಡಿ.ರೇವಣ್ಣ ಅವರನ್ನು ಸೂಪರ್ ಸಿ.ಎಂ ಎಂದು ಕರೆದರು’ ಎಂದು ಸುದ್ದಿಗಾರರಿಗೆ ದೇವೇಗೌಡ ತಿಳಿಸಿದರು.

‘ಕುಮಾರಸ್ವಾಮಿ ಅವರು ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಸಂದರ್ಭದಲ್ಲೂ, ಅದಕ್ಕೆ ಹಲವು ರಾಜಕೀಯ ಬಣ್ಣಗಳನ್ನು ಹಚ್ಚಲಾಯಿತು.

ಈ ವರದಿಗಳ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

‘ಕೆಲವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಅವರನ್ನು ಸೂಪರ್ ಸಿ.ಎಂ ಎಂದು ಕರೆದರೂ, ನಾನು ಏನೂ ಹೇಳುತ್ತಿಲ್ಲ.

ಶಿರಾ ಉಪಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ದೇವೇಗೌಡರು, ‘ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ. ಇತ್ತೀಚೆಗೆ ಮೃತಪಟ್ಟ ಸತ್ಯನಾರಾಯಣ ಅವರ ಕುಟುಂಬದವರ ಜೊತೆ ಮಾತುಕತೆ ನಡೆಸಲಾಗುತ್ತಿದೆ’ ಎಂದರು.

Edited By : Nirmala Aralikatti
PublicNext

PublicNext

20/09/2020 10:45 pm

Cinque Terre

95.17 K

Cinque Terre

2

ಸಂಬಂಧಿತ ಸುದ್ದಿ