ಚಿಕ್ಕೋಡಿ : ಸದ್ಯ ಸಂವಿಧಾನ ಕೋಮುವಾದಿಗಳ ಕೈಯಲ್ಲಿದೆ ಅದನ್ನು ರಕ್ಷಣೆ ಮಾಡುವ ಕೆಲಸ ಆಗಬೇಕಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಎನ್ ಎಸ್ ಹರಡೇಕರ ಸೇವಾದಳ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಮಾಜದಲ್ಲಿ ಜಾತಿ ಒಡೆದು, ಕೋಮು ಗಲಭೆ ಮಾಡಿಸುವುದೇ ಬಿಜೆಪಿ ಪಕ್ಷದ ಕೆಲಸವಾಗಿದೆ ಎಂದು ಗುಡುಗಿದರು.
ಮಹಾತ್ಮ ಗಾಂಧಿಯವರನ್ನು ಕೊಂದವರು ಮತಾಂಧರು. ಅಂತಹ ಮತಾಂಧ ಗೋಡ್ಸೆ ಬಿಜೆಪಿ ಹಾಗೂ ಆರ್.ಎಸ್.ಎಸ್ನ ಆರಾಧ್ಯ ದೈವ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಕೆಡವಿ ಸಂವಿಧಾನ ಸುಟ್ಟು ಹಾಕಬೇಕು ಎಂದವರು ಇಂದು ಬಿಜೆಪಿ ರಾಷ್ಟ್ರೀಯ ಯೂತ್ ನ ಅಧ್ಯಕ್ಷರಾಗಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹರಿಹಾಯ್ದರು.
ಯಡಿಯೂರಪ್ಪನ ಮೊಮ್ಮಗ ಆರ್.ಟಿ.ಜಿ.ಎಸ್ ಮೂಲಕ ಲಂಚ ಪಡೆದರು ರಾಜೀನಾಮೆ ಕೊಡುತ್ತಿಲ್ಲ. ಪ್ರೊವ್ ಮಾಡಿ ರಾಜೀನಾಮೆ ಕೊಡುತ್ತೇನೆ ಅಂತಾರೆ.
ಪ್ರೂವ್ ಮಾಡಲು ತನಿಖೆ ನಡೆಸುವವರು ಯಾರು? ಮೊದಲು ತನಿಖೆಯಾಗಲಿ ಅವರ ಮೇಲಿರುವ ಆರೋಪ ಸಾಬೀತಾಗದೇ ಇದ್ದಲ್ಲಿ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಸಿಎಂ ಅವರಿಗೆ ಸವಾಲು ಹಾಕಿದ್ದಾರೆ.
PublicNext
02/10/2020 06:31 pm