ಆಲಪ್ಪುಳ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಸ್ತುತ ತಮ್ಮ ಪಕ್ಷದ ಇತರ ಸದಸ್ಯರೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿದ್ದಾರೆ. ಇದರ ಮಧ್ಯೆ ಇಂದು ರಾಹುಲ್ ಗಾಂಧಿ ಕೇರಳದ ಪ್ರಸಿದ್ಧ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಭಾರತ್ ಜೋಡೊ ಯಾತ್ರೆಯ 12ನೇ ದಿನವಾದ ಸೋಮವಾರ ಆಲಪ್ಪುಳದಿಂದ ಪಾದಯಾತ್ರೆ ಮುಂದುವರಿಸಲಾಯಿತು. ಮಧ್ಯಾಹ್ನದ ಬಳಿಕ ಪುನ್ನಮಡ ಹಿನ್ನೀರಿನಲ್ಲಿ ವಿಶೇಷ ದೋಣಿ ಪ್ರದರ್ಶನ ಸ್ಪರ್ಧೆ ಏರ್ಪಡಿಸಲಾಯಿತು.
ಕೇರಳದಲ್ಲಿ ಓಣಂ ಹಬ್ಬದ ಪ್ರಯುಕ್ತ ವರ್ಷಂಪ್ರತಿ ನೆಹರೂ ಟ್ರೋಫಿ ದೋಣಿ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಈ ಬಾರಿಯ ಸ್ಪರ್ಧೆ ತಿಂಗಳಾರಂಭದಲ್ಲಿ ಆಯೋಜನೆಯಾಗಿತ್ತು.
PublicNext
19/09/2022 08:28 pm