ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವ್ರು ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಸಾಧನೆಯನ್ನ ಕೊಂಡಾಡಿದ್ದಾರೆ.
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡೋವಾಗ ಮೋದಿ, ಮಿಥಾಲಿ ರಾಜ್ ಸಾಧನೆಯನ್ನ ಪ್ರಸ್ತಾಪಿಸಿದ್ದಾರೆ. 39 ವರ್ಷ ವಯಸ್ಸಾಗಿದ್ದರೂ ದೇಶಕ್ಕಾಗಿ ದುಡ್ಡಿದಿರೋದು ಎಲ್ಲರಿಗೂ ಸ್ಪೂರ್ತಿದಾಯಕವಾಗಿಯೇ ಇದೆ ಅಂತಲೇ ಬಣ್ಣಿಸಿದ್ದಾರೆ.
ಮಿಥಾಲಿ ರಾಜ್ ಅದೆಷ್ಟೋ ಕ್ರೀಡಾ ಪ್ರೇಮಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಇವರೊಬ್ಬ ಅಸಾಮಾನ್ಯ ಕ್ರಿಕೆಟರ್. ಇವರ ಮುಂದಿನ ಉಜ್ವಲ ಭವಿಷ್ಯಕ್ಕೆ ನಾನು ಶುಭ ಹಾರೈಸುತ್ತೇನೆ ಅಂತಲೇ ಮೋದಿ ತಿಳಿಸಿದ್ದಾರೆ.
PublicNext
27/06/2022 07:25 am