ಭಾರತದ ಕ್ರಿಕೆಟ್ ಲೋಕದ ದಿಗ್ಗಜ ಕಪಿಲ್ ದೇವ್ ರಾಜಕೀಯಕ್ಕೆ ಸೇರ್ತಾರೆ. ಅದರಲ್ಲೂ ಆಮ್ ಆದ್ಮಿ ಪಕ್ಷದ ಮೂಲಕವೇ ರಾಜಕೀಯ ಪ್ರವೇಶ ಮಾಡ್ತಾರೆ ಅನ್ನೋ ಸುದ್ದಿ ದಟ್ಟವಾಗಿತ್ತು. ಆದರೆ, ಈಗ ಆ ಸುದ್ದಿಗೆ ಸ್ವತಃ ಕಪಿಲ್ ದೇವ್ ತೆರೆ ಎಳೆದಿದ್ದಾರೆ.
ಕಪಿಲ್ ದೇವ್ ರನ್ನ ಇತ್ತೀಚಿಗೆ ಆಪ್ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಮೀಟ್ ಆಗಿದ್ದರು. ಆ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕಪಿಲ್ ರಾಜಕೀಯಕ್ಕೆ ಬರ್ತಾರೆ ಅನ್ನೋ ಸುದ್ದಿಗಳು ಹರಿದಾಡಿದ್ದವು.
ಆದರೆ, ಕಪಿಲ್ ದೇವ್ ತಾವು ರಾಜಕೀಯಕ್ಕೆ ಬರೋದಿಲ್ಲ ಅಂತ ನೇರಾ-ನೇರವಾಗಿಯೇ ಹೇಳಿದ್ದಾರೆ.ನನಗೆ ಯಾವುದೇ ರಾಜಕೀಯ ಪಕ್ಷದ ಜೊತೆಗೆ ಯಾವುದೇ ಸಂಬಂಧವೂ ಇಲ್ಲ ಅಂತಲೂ ನೇರವಾಗಿಯೇ ಹೇಳಿ ಊಹಾ-ಪೂಹಗಳಿಗೆ ತೆರೆ ಎಳೆದು ಬಿಟ್ಟಿದ್ದಾರೆ.
PublicNext
23/05/2022 10:42 pm