ಚಂಡೀಗಡ: ಟೀಂ ಇಂಡಿಯಾದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇತ್ತೀಚಿಗೆ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದೆ. ಬುಧವಾರ ಭಗವಂತ್ ಮಾನ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಅಮೋಘ ಗೆಲುವಿನ ಹಿನ್ನೆಲೆಯಲ್ಲಿ ಎಎಪಿ ಪಂಜಾಬ್‌ನಲ್ಲಿ ರಾಜ್ಯಸಭೆಯ 5 ಸ್ಥಾನಗಳನ್ನು ಪಡೆಯಲಿದೆ.
‘ಪಂಜಾಬ್ ಸಿಎಂ ಸೇರಿದಂತೆ ಎಎಪಿಯ ಅಗ್ರ ನಾಯಕರು ರಾಜ್ಯಸಭೆಗೆ ತಮ್ಮ ಹೆಸರನ್ನು ಪಕ್ಷದಿಂದ ನಾಮನಿರ್ದೇಶನ ಮಾಡುವ ಕುರಿತಂತೆ ಹರ್ಭಜನ್ ಸಿಂಗ್ ಜೊತೆ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅತ್ಯಂತ ಕುಸಿತ ಕಂಡಿರುವ ಕ್ರೀಡಾ ವಲಯವನ್ನು ಮೇಲೆತ್ತುವ ದೃಷ್ಟಿಯಿಂದ ಹರ್ಭಜನ್ ಸಿಂಗ್ ಅವರನ್ನು ರಾಜ್ಯಸಭೆಗೆ ಕಳುಹಿಸುವುದು ನೂತನ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರ ಇಚ್ಛೆಯಾಗಿದೆ’ಎಂದು ಸಿಂಗ್ ಆಪ್ತರು ತಿಳಿಸಿದ್ದಾಗಿ ವರದಿಯಾಗಿದೆ.
PublicNext
17/03/2022 05:35 pm