ನವದೆಹಲಿ:ಟಿ-20 ವಿಶ್ವ ಕಪ್ ನಲ್ಲಿ ಪಾಕಿಸ್ತಾನದ ತಂಡ ಗೆದ್ದಿದೆ. ಭಾರತ ತಂಡ ಸೋತು ಹೋಗಿದೆ. ಆಟದಲ್ಲಿ ಸೋಲು-ಗೆಲುವು ಕಾಮನ್ ಆಗಿಯೇ ಇರುತ್ತದೆ. ಆದರೆ ಭಾರತದ ಕ್ರಿಕೆಟ್ ಪ್ರಿಯರು ಇಂಡಿಯಾದ ವೇಗಿ ಮೊಹ್ಮದ್ ಶಮಿ ಅವರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಸಾಮಾಜಿಕ ತಾಣದಲ್ಲಿ ಮನಸೋಯಿಚ್ಛೆ ಬೈದುಹಾಕುತ್ತಿದ್ದಾರೆ.
ಇಂಡಿಯನ್ ಟೀಮ್ ವೇಗಿ ಮೊಹ್ಮದ್ ಶಮಿ ಅನ್ನ ಮನಸ್ಸಿಗೆ ಬಂದಂತೆ ಎಲ್ಲರೂ ಬೈಯುತ್ತಿದ್ದಾರೆ. ಶಮಿ ಎಸೆದ ಓವರ್ ನಲ್ಲಿಯೇ ಪಾಕ್ ಗೆಲುವು ಕಂಡಿತು. ಇದರಿಂದ ರೊಚ್ಚಿಗೆದ್ದ ಕ್ರಿಕೆಟ್ ಪ್ರೇಮಿಗಳು ಶಮಿಯನ್ನ ಟೀಕಿಸುತ್ತಲೇ ಇದ್ದಾರೆ. ಪಾಕಿಸ್ತಾನದಿಂದ ನೀನು ಎಷ್ಟು ದುಡ್ಡು ತೆಗೆದುಕೊಂಡಿದ್ದೀಯಾ ? ಪಾಕಿಸ್ತಾನಕ್ಕೇನೆ ನೀನು ಹೋಗು ಅಂತಲೇ ಬೈದಾಡುತ್ತಿದ್ದಾರೆ.
ಈ ಒಂದು ಕೆಟ್ಟ ಬೆಳವಣಿಗೆಯನ್ನ ಹೈದ್ರಾಬಾದ್ ನ ಹಾಲಿ ಸಂಸದ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ. ಶಮಿ ಪರವಾಗಿಯೇ ಬ್ಯಾಟ್ ಬೀಸಿದ್ದಾರೆ. ಇಂಡಿಯನ್ ಟೀಮ್ ಅಲ್ಲಿ 11 ಜನ ಇದ್ದಾರೆ. ಅವರಲ್ಲಿ ಕೇವಲ ಶಮಿಯನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಾ.? ಆಟ ಅಂದ್ಮೇಲೆ ಸೋಲು-ಗೆಲುವು ಇರೋದೆ ಅಂತಲೆ ಹೇಳಿದ್ದಾರೆ ಓವೈಸಿ.
PublicNext
26/10/2021 12:08 pm