ಮುಂಬೈ: ಕ್ರಿಕೆಟ್ ಕ್ಷೇತ್ರದ ದೇವರು ಮತ್ತು ಮಾಸ್ಟರ್ ಬ್ಲಾಸ್ಟರ್ ಎಂದೇ ಜಗದ್ವಿಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರಿಗೆ, ಕ್ರಿಕೆಟ್ ಹೊರತು ಪಡಿಸಿ ಇತರ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಧಮ್ಕಿ ಹಾಕಿದ ಎನ್ ಸಿಪಿ ನಾಯಕ, ಹಿರಿಯ ರಾಜಕಾರಣಿ ಶರದ್ ಪವರ್ ಗೆ ಭಾರತೀಯರು ಮಂಗಳಾರತಿ ಮಾಡಿದ್ದಾರೆ.
ಭಾರತದ ಪರ, ಭಾರತೀಯತೆ ಕುರಿತು, ದೇಶದ ಸಾರ್ವಭೌಮತ್ವ ಕುರಿತು ಮಾತನಾಡಿದ ಸಚಿನ್ ಗೆ ಧಮ್ಮಿ ಹಾಕಲಾಗುತ್ತಿದೆ ಎಂದು ಅಭಿಮಾನಿಗಳ ಪವಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ಪ್ರತಿಭಟನೆ ಹಾಗೂ ವಿದೇಶಿ ಸೆಲೆಬ್ರೆಟಿಗಳ ಟ್ವೀಟರ್ ಅಭಿಯಾನದ ಕುರಿತ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಸಚಿನ್ ತೆಂಡುಲ್ಕರ್ ಗೆ ನಾನು ಎಚ್ಚರಿಸುತ್ತಿದ್ದೇನೆ. ಇತರ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಪವಾರ್ ಅವಾಜ್ ಹಾಕಿದ್ದಾರೆ.
ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಪವಾರ್ ಬಹಿರಂಗವಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ದೇಶದ ಪರ ಮಾತನಾಡಿದ ಸಚಿನ್ ಗೆ ಧಮ್ಕಿ ಹಾಕಲಾಗುತ್ತಿದೆ ಎಂದು ಪವಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
07/02/2021 07:31 am