ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್‌ ಗೆಲುವಿಗೆ ಭಾರತದ ಮುಸ್ಲಿಮರಿಂದಲೂ ಬೆಂಬಲ, ಸಂಭ್ರಮ: ಪಾಕ್ ಸಚಿವನಿಂದ ಹುಚ್ಚು ಹೇಳಿಕೆ

ನವದೆಹಲಿ: ಟಿ-20 ವಿಶ್ವಕಪ್‌ ಇತಿಹಾಸದಲ್ಲೇ ಪಾಕಿಸ್ತಾನವು ಟೀಂ ಇಂಡಿಯಾ ವಿರುದ್ಧ ಮೊದಲ ಬಾರಿಗೆ (ನಿನ್ನೆ) ಗೆಲುವು ಸಾಧಿಸಿದೆ. ಇದನ್ನು ಸಂಭ್ರಮಿಸುವ ಬದಲು ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್​ ನಾಲಿಗೆ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಿಡಿ ಹಚ್ಚಿಸಿದ್ದಾರೆ.

ಪಾಕ್ ಸಚಿವ ಶೇಖ್ ರಶೀದ್ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಶೇಖ್ ರಶೀದ್, "ಮುಸಲ್ಮಾನರು ಜಗತ್ತಿನಾದ್ಯಂತ ಇದ್ದಾರೆ. ಭಾರತದಲ್ಲೂ ಮುಸ್ಲಿಮರು ಇದ್ದಾರೆ. ಅವರು ಕೂಡ ಪಾಕಿಸ್ತಾನ ತಂಡಕ್ಕೆ ಬೆಂಬಲ ನೀಡಿದ್ದಾರೆ. ಪಾಕಿಸ್ತಾನ ತಂಡದ ಜೊತೆಗೆ ಹಿಂದೂಸ್ತಾನ್​​ನಲ್ಲಿರುವ ಮುಸ್ಲಿಮರೂ ಇದ್ದಾರೆ. ಪಾಕಿಸ್ತಾನಕ್ಕೆ ಭಾರತದ ವಿರುದ್ಧದ ಪಂದ್ಯವೇ ಫೈನಲ್ ಆಗಿತ್ತು" ಎಂದಿದ್ದಾರೆ.

Edited By : Vijay Kumar
PublicNext

PublicNext

25/10/2021 04:42 pm

Cinque Terre

69.2 K

Cinque Terre

79

ಸಂಬಂಧಿತ ಸುದ್ದಿ