ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವಲ್ಲಿ ವಿಫಲವಾದರೂ ಭಾರತ ಮಹಿಳಾ ಹಾಕಿ ತಂಡದ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವನಿತೆಯರ ಹೋರಾಟವನ್ನು ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರು, ಗಣ್ಯರು ಹಾಡಿ ಹೊಗಳಿದ್ದಾರೆ.
ಹರಿಯಾಣದ ಸಿಎಂ ಮನೋಹರ್ ಲಾಲ್ ಖಟ್ಟರ್, ಟೋಕಿಯೋ ಒಲಿಂಪಿಕ್ಸ್ನಲ್ಲಿ ಅಭಿನಂದನಾರ್ಹ ಆಟವನ್ನು ಆಡಿದ ದೇಶದ ಮಹಿಳಾ ತಂಡಕ್ಕೆ ಶುಭಾಶಯಗಳು ಎಂದು ತಿಳಿಸಿದ್ದಾರೆ. ಜೊತೆಗೆ ಹರಿಯಾಣದಿಂದ ಹಾಕಿ ತಂಡಕ್ಕೆ ಆಯ್ಕೆಯಾದ 9 ಮಂದಿಗೆ ತಲಾ 50 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ರಾಣಿ ರಾಂಪಾಲ್, ಸವಿತಾ ಪೂನಿಯಾ, ಮೋನಿಕಾ ಮಲಿಕ್, ನೇಹಾ ಗೋಯಲ್, ನವಜೋತ್ ಕೌರ್, ನವನೀತ್ ಕೌರ್, ನಿಶಾ, ಶರ್ಮಿಳಾ, ಉದಿತಾ ಹರಿಯಾಣ ರಾಜ್ಯದಿಂದ ಭಾಗವಹಿಸಿದ ಆಟಗಾರರಾಗಿದ್ದಾರೆ.
PublicNext
06/08/2021 12:10 pm