ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನನ್ನ ಮಗ ಎಂದು ಸಿಎಎ ವಿರುದ್ಧ ಪ್ರತಿಭಟಿಸಿದ್ದ ಶಾಹೀನ್‌ಭಾಗ್ ದಾದಿ ಬಿಲ್ಕಿಸ್ ಬಾನು ಹೊಗಳಿದ್ದಾರೆ.
ಟೈಮ್ ಮ್ಯಾಗಝೀನ್‌ನ ೧೦೦ ''ಅತ್ಯಂತ ಹೆಚ್ಚು ಪ್ರಭಾವಶಾಲಿ ವ್ಯಕ್ತಿಗಳು-೨೦೨೦'' ಪಟ್ಟಿಯಲ್ಲಿ ಪ್ರಧಾನಿ ಮೋದಿ, ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆದ ಸಿಎಎ ಪ್ರತಿಭಟನೆಯಿಂದ ಚಿರಪರಿಚಿತರಾದ ೮೨ ವರ್ಷದ ಬಿಲ್ಕಿಸ್ ಬಾನು ಸ್ಥಾನ ಪಡೆದಿದ್ದಾರೆ. ಜೊತೆಗೆ ಈ ಪಟ್ಟಿಯಲ್ಲಿ ನಟ ಆಯುಷ್ಮಾನ್ ಖುರಾನ, ರವೀಂದ್ರ ಗುಪ್ತ, ಸುಂದರ್ ಪಿಚ್ಚೈ ಕೂಡಾ ಇದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬಿಲ್ಕಿಸ್ ಬಾನು ದಾದಿ, ನಾನು ಖರಾನ್ ಶರೀಫ್ ಮಾತ್ರ ಓದಿದ್ದು, ಶಾಲೆಗೆ ಶಾಲೆಗೆ ಹೋಗಿಲ್ಲ. ಇಂದು ನನಗೆ ಖುಷಿಯಾಗುತ್ತಿದೆ. ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಇರುವುದಕ್ಕೆ ಪ್ರಧಾನಿಗೆ ಶುಭಾಶಯ. ಅವರೂ ನನ್ನ ಮಗ. ನಾನು ಜನ್ಮ ನೀಡಿರದಿದ್ದರೆ ಏನಾಯ್ತು..? ನನ್ನ ಸಹೋದರಿ ಜನ್ಮ ನೀಡಿದ್ದಾಳೆ. ಅವರ ದೀರ್ಘಾಯಸ್ಸು ಮತ್ತು ಸಂತೋಷಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಹಾರೈಸಿದ್ದಾರೆ.
ಶಾಹೀನ್ ಬಾಗ್ ಪ್ರತಿಭಟನೆ 101 ದಿನ ನಡೆದಿತ್ತು. ಮಾರ್ಚ್ 24ರಂದು ದೆಹಲಿ ಪೊಲೀಸರು ಕೊರೊನಾ ವೈರಸ್ ಹಿನ್ನೆಲೆ ಪ್ರತಿಭಟನಾಕಾರರನ್ನು ಚದುರಿಸಿದ್ದರು.
PublicNext
25/09/2020 06:49 pm