ಗಾಂಧಿನಗರ: ಮುಸ್ಲಿಮರನ್ನು ನೇಣಿಗೆ ಹಾಕುವ ಕಾರ್ಟೂನ್ ಶೇರ್ ಮಾಡಿದ ಬಿಜೆಪಿಗೆ ಟ್ವಿಟ್ಟರ್ ಎಚ್ಚರಿಕೆ ಸಂದೇಶ ನೀಡಿದೆ.
ಹೌದು. ರಾಜಕೀಯ ಪಕ್ಷಗಳು ಕೆಲವೊಮ್ಮೆ ಇತರರನ್ನು ತೆಗಳುವ ಭರದಲ್ಲಿ ಮಿತಿ ಮೀರಿ ಬಿಡುತ್ತವೆ. ಅವಹೇಳನಾಕಾರಿ ಪೋಸ್ಟ್ಗಳನ್ನು, ವಿಡಿಯೋಗಳನ್ನು, ಕಾರ್ಟೂನ್ಗಳನ್ನು ರಾಜಕೀಯ ಪಕ್ಷಗಳು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡು ವಿಕೃತಿ ಮೆರೆಯುತ್ತವೆ. ಈಗ ಇಂತಹದ್ದೇ ಘಟನೆಯೊಂದು ನಡೆದಿದ್ದು, ಇದರಲ್ಲಿ ಅವಹೇಳನಾಕಾರಿ ಪೋಸ್ಟ್ ಹಂಚಿದ್ದಕ್ಕೆ ಟ್ವಿಟರ್ ಸಂಸ್ಥೆಯು ಬಿಜೆಪಿಗೆ ವಾರ್ನಿಂಗ್ ಕೊಟ್ಟಿದೆ. ಜೊತೆಗೆ ಪೋಸ್ಟನ್ನು ಡಿಲೀಟ್ ಮಾಡಿದೆ.
2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 38 ಜನರಿಗೆ ಮರಣದಂಡನೆ ವಿಧಿಸಿ ಗುಜರಾತ್‌ನ ವಿಶೇಷ ನ್ಯಾಯಾಲಯವು ಶುಕ್ರವಾರ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಗುಜರಾತ್ ಘಟಕವು, ಮುಸ್ಲಿಂ ಪುರುಷರ ಗುಂಪನ್ನು ಗಲ್ಲಿಗೇರಿಸುವುದನ್ನು ಚಿತ್ರಿಸುವ ಕಾರ್ಟೂನ್ ಅನ್ನು ಪೋಸ್ಟ್ನ್ನು ಟ್ವೀಟ್ ಮಾಡಿತ್ತು. ಇದನ್ನು ಟ್ವಿಟರ್ ಭಾನುವಾರ ತೆಗೆದುಹಾಕಿದೆ.
PublicNext
22/02/2022 08:17 am