ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಲಕ್ಷ್ಮಣ ಸವದಿ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿ ವಿಶೇಷ ಪೂಜೆ

ಅಥಣಿ : ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರು ಶೀಘ್ರ ಗುಣಮುಖರಾಗಲಿ ಎಂದು ಕೆಂಪವಾಡ ಗ್ರಾಮದ ಎಲ್ಲ ರೈತರು ಹಾಗೂ ಮುಖಂಡರು ಸೇರಿ ಶ್ರೀ ಮಲಕಾಸಿದ್ಧ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥಿಸಿದರು.

ಕಾಗವಾಡ ಮತಕ್ಷೇತ್ರದ ಕೆಂಪವಾಡ ಗ್ರಾಮದ ಮುಖಂಡ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲಪ್ಪಾ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಶೀಘ್ರ ಗುಣಮುಖರಾಗಲಿ. ಅವರಿಗೆ ರಾಜ್ಯದಲ್ಲಿ ಇನ್ನೂ ಉನ್ನತ ಸ್ಥಾನಕ್ಕೆ ಹೋಗಲು ಇದ್ದು ಜನ ಆಶೀರ್ವಾದ ಅವರ ಬೆನ್ನೆಲುಬಾಗಿ ಜನ ನಿಂತಿದ್ದಾರೆ ಎಂದರು.

ಈ ವೇಳೆ ಮಲಕಾಸಿದ್ಧದೇವರ ಅರ್ಚಕ ವಿಶೇಷ ಪೂಜೆ ನೆರವೇರಿಸಿದರು, ಲಕ್ಷ್ಮಣ ಸವದಿ ಅವರು ಬೇಗ ಗುಣಮುಖರಾಲಗಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು, ಈ ವೇಳೆ ಅನೇಕರು ಉಪಸ್ಥಿತರಿದ್ದರು.

Edited By : Abhishek Kamoji
PublicNext

PublicNext

03/09/2022 04:49 pm

Cinque Terre

29.58 K

Cinque Terre

2

ಸಂಬಂಧಿತ ಸುದ್ದಿ