ಗದಗ: 1997 ರಲ್ಲಿ ರಾಜ್ಯದಲ್ಲಿ 7 ಹೊಸ ಜಿಲ್ಲೆಗಳಾಗಿ ಘೋಷಣೆಯಾದವು. ಹೊಸ ಜಿಲ್ಲೆಗಳಾಗಿ ಇಂದಿಗೆ 25 ವರ್ಷವಾಗಿದೆ.ಹೋರಾಟಗಾರರು, ಶರಣರು, ಸಂತರು, ಸಾಹಿತಿಗಳು, ದಾರ್ಶನಿಕರ ಪುತ್ಥಳಿಗೆ ಹೂ ಮಾಲೆ ಹಾಕಲಾಗದಷ್ಟು ಹೀನಾಯ ಸ್ಥಿತಿಗೆ ಸರ್ಕಾರ ಬಂತಾ ಅಂತ ಜನ ಕಿಡಿಕಾರುತಿದ್ದಾರೆ. ಹೊಸ ಜಿಲ್ಲೆಯಾದ್ರೆನು ಫಲ. ಅಭಿವೃದ್ಧಿ ಕುಂಠಿತ ನಿರ್ಲಕ್ಷ್ಯಕ್ಕೊಳಗಾದ ಗದಗ ಜಿಲ್ಲೆಯ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.
ಗದಗ ಜಿಲ್ಲೆಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಆದ್ರೆ ಆ ಸಂಭ್ರಮ ಕಳೆಗುಂದಿದೆ. 25 ವರ್ಷಗಳಾದ್ರೂ ಸರಿಯಾದ ರಸ್ತೆ, ಚರಂಡಿ, ಕುಡಿಯುವ ನೀರು, ವಾಹನ ಸೌಕರ್ಯ, ಕೈಗಾರಿಕೆ, ಕಾರ್ಖಾನೆ ಹೀಗೆ ಅನೇಕ ಸೌಕರ್ಯಗಳಿಂದ ವಂಚಿತವಾಗಿದೆ.
ಜಿಲ್ಲಾ ರಚನೆ ಸಂದರ್ಭದಲ್ಲಿ ಅವಘಡಗಳು ಸಂಭವಿಸಿದವು. ಸೀಮೆ ಎಣ್ಣೆ ಸುರಿದುಕೊಂಡು ಓರ್ವ ಯುವಕ ಸಾವನ್ನಪ್ಪಿದ, ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ ಆಸ್ತಿ-ಪಾಸ್ತಿ, ದಾಖಲೆಗಳನ್ನು ನಾಶಮಾಡಲಾಯಿತು. ಹೋರಾಟ, ಅಹಿಂಸೆ ಏನೆಲ್ಲಾ ಘಟನೆಗಳು ನಡೆದವು. ನಂತರ ಧಾರವಾಡ ಜಿಲ್ಲೆಯಿಂದ ಗದಗ ಹೊಸ ಜಿಲ್ಲೆಯಾಗಿ ಘೋಷಣೆ ಆಯಿತು.
ಸದ್ಯ ಈ ಜಿಲ್ಲೆಯಾಗಿ 25 ನೇ ವರ್ಷಾಚರಣೆಗೆ ಸರ್ಕಾರ ಹಾಗೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಕಡೆಪಕ್ಷ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು, ಶರಣರು, ಸಂತರು, ಸಾಹಿತಿಗಳು, ದಾರ್ಶನಿಕರ ಪುತ್ಥಳಿ ಸ್ವಚ್ಛಗೊಳಿಸಿ ಹೂ ಮಾಲೆ ಹಾಕಲಾಗದಷ್ಟು ಹೀನಾಯ ಸ್ಥಿತಿಗೆ ಸರ್ಕಾರ ಬಂತಾ ಎಂದು ಜನ ಕಿಡಿಕಾರುತ್ತಿದ್ದಾರೆ.
ಗದಗ ಹಲವು ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದಿದೆ. ಮುದ್ರಣ ಕ್ಷೇತ್ರದಲ್ಲಿ ಗದಗ ಜಿಲ್ಲೆ ಮಾದರಿ. ಜಿಲ್ಲೆ ಸಣ್ಣದಾದರೂ ಸಾಧನೆ ಬಹುದೊಡ್ಡದು. ಇಷ್ಟೇಲ್ಲಾ ಇದ್ರೂ ಅಭಿವೃದ್ಧಿ ಶೂನ್ಯವಾಗಿದೆ. ಧರ್ಮ ದಂಗಲ್, ಕೋಳಿ, ಮೊಟ್ಟೆ, ಮಾಂಸ, ಪರ್ಸೆಂಟೇಜ್ ಅಂತ ಜಿಲ್ಲೆ ಉತ್ಸವ ಮರೆತಿರುವುದು ನಾಚಿಕೆಗೇಡಿತನ. ಅದೇನೆ ಇರಲಿ ಸರ್ಕಾರ ಜಿಲ್ಲೆಗಳ ಬೆಳ್ಳಿ ಮಹೋತ್ಸವ ಮರೆತಿರುವುದು ವಿಪರ್ಯಾಸವೇ ಸರಿ.
PublicNext
25/08/2022 08:53 am