ಸೊರಬ: ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ರೋಗ ರುಜಿನಗಳು ಹೆಚ್ಚಾಗಲಿವೆ. ಹಿಂಗಾರು ಕಡಿಮೆಯಾಗಿ ಅಕಾಲಿಕ ಮಳೆ ಸುರಿಯಲಿದೆ ರಾಜಕೀಯ ಪಕ್ಷಗಳು ಇಬ್ಭಾಗವಾಗಲಿವೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದ ಆವರಣದ ಆವರಣದಲ್ಲಿ ಜೀರ್ಣೋದ್ಧಾರ ಆಗುತ್ತಿರುವ ಶ್ರೀ ಕುಮಾರ ಕಂಪಿನ ಸಿದ್ದವೃಷಭೇಂದ್ರ ಕರ್ತೃ ಗದ್ದುಗೆಯ ಶಿಲಾಮಯ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ನಂತರ ಶ್ರೀಗಳು ಮಾತನಾಡುತ್ತಿದ್ದರು.
ಶುಭಕೃತ ನಾಮಸಂವತ್ಸರ ದೇಶದಲ್ಲಿ ಅಶುಭ ಉಂಟು ಮಾಡಲಿದೆ. ಮಠದಲ್ಲಿ ಪಂಚಾಗ್ನಿ ಮಾಡುವ ಸಂದರ್ಭದಲ್ಲಿ ಅಗ್ನಿಕುಂಡ ಒಡೆದು ಗಾಯ ಮಾಡಿತು. ಪೂರ್ಣ ಪ್ರಮಾಣದಲ್ಲಿ ಪೂಜೆ ಸಲ್ಲಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ನಾಡಿನಲ್ಲಿ ಬೆಂಕಿ ಅನಾಹುತ ಆಗುವ ಸಂಭವ ಇದೆ. ಸದ್ಯ ಮತಾಂಧತೆಯಿಂದಾಗಿ ಗಲಭೆಗಳು ನಡೆಯುತ್ತಿದ್ದು ಇದಕ್ಕೆ ಜ್ಞಾನದ ಕೊರತೆಯೇ ಕಾರಣ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಲಿದೆ ಎಂದು ಶ್ರೀಗಳು ಹೇಳಿದ್ದಾರೆ.
PublicNext
17/08/2022 10:51 pm