ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೀರ್ ಪಾಷಾ ದರ್ಗಾ ಥೇಟ್ ಹಿಂದೂ ದೇವಾಲಯದಂತೆ ಕಾಣುತ್ತೆ: ಶಾಸಕ ಶರಣು ಸಲಗರ್

ಬಸವಕಲ್ಯಾಣ: ಪೀರ್‌ ಪಾಷಾ ದರ್ಗಾ ಹಿಂದೂ ದೇಗುಲದಂತೆ ಕಾಣುತ್ತದೆ. ಶೈವ ಪರಂಪರೆಯ ಅನೇಕ ಕುರುಹುಗಳು ಅಲ್ಲಿವೆ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಹೇಳಿದ್ದಾರೆ.

ಬಸವಕಲ್ಯಾಣದ ಬಿಕೆಡಿಬಿ ಸಭಾಭವನದಲ್ಲಿ ಚಿಂತನ ಮಂಥನ ಸಭೆ ಉದ್ದೇಶಿಸಿ ಮಾತನಾಡಿದ ಶಾಸಕ, “ಪೀರ್‌ ಪಾಷಾ ದರ್ಗಾ ಹಿಂದೂ ದೇಗುಲದಂತೆ ಕಾಣುತ್ತದೆ. ಶೈವ ಪರಂಪರೆಯ ಆನೇಕ ಕುರುಹುಗಳು ಅಲ್ಲಿವೆ. ನಮ್ಮ ಹೋರಾಟಕ್ಕೆ ಮೂಲಕ ಅನುಭವ ಮಂಟಪ ಸಿಕ್ಕೇ ಸಿಗುತ್ತೆ. ಮೂಲ ಅನುಭವ ಮಂಟಪದ ಬಗ್ಗೆ ನಮಗೆಲ್ಲ ಗೊಂದಲವಿದೆ. ಆ ಗೊಂದಲವನ್ನ ಸರ್ಕಾರ ಬಗೆಹರಿಸುತ್ತೇವೆಂಬ ವಿಶ್ವಾಸವಿದೆ” ಎಂದು ಹೇಳಿದರು.

ಇದೇ ವೇದಿಕೆಯಲ್ಲಿ ರಾಷ್ಟ್ರೀಯ ವೀರಶೈವ-ಲಿಂಗಾಯತ ವೇದಿಕೆ ಅಧ್ಯಕ್ಷ ಪ್ರದೀಪ್‌ ಕಂಕಣವಾಡಿ ಹಲವೆಡೆ ವೀರಶೈವ-ಲಿಂಗಾಯತ ಆಸ್ತಿಗಳು ಬೇರೆಯವರ ಪಾಲಾಗಿವೆ. ಮೂಲ ಅನುಭವ ಮಂಟಪ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದರು.

Edited By : Nagaraj Tulugeri
PublicNext

PublicNext

12/06/2022 06:31 pm

Cinque Terre

49.74 K

Cinque Terre

10

ಸಂಬಂಧಿತ ಸುದ್ದಿ