ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್‌ನ ಪೀರ್ ಪಾಷಾ ದರ್ಗಾ ನಮ್ಮದು: ಸ್ವಾಮೀಜಿಗಳ ಒಕ್ಕೊರಲ ನಿರ್ಣಯ

ಬೆಳಗಾವಿ: ರಾಜ್ಯದಲ್ಲಿ ಈಗ ಶ್ರೀರಂಗಪಟ್ಟಣ ಜಾಮೀಯಾ ಮಸೀದಿ ವಿವಾದದ ಬಳಿಕ, ಈಗ ಬೀದರ್ ಪೀರ್ ಪಾಷಾ ದರ್ಗಾ ವಿವಾದ ತಾರಕಕ್ಕೇರಿದೆ. ಈ ದರ್ಗಾವೇ ಮೂಲ ಅನುಭವ ಮಂಟಪ ಎಂಬುದಾಗಿ ಇಂದು ಸ್ವಾಮೀಜಿಗಳು ಒಕ್ಕೊರಲ ನಿರ್ಣಯವನ್ನು ಕೈಗೊಂಡಿದ್ದಾರೆ.

ಬೆಳಗಾವಿಯ ಬಿಕೆಡಿಬಿ ಸಭಾಭವನದಲ್ಲಿ ಈ ಸಂಬಂಧ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದಂತ ಸ್ವಾಮೀಜಿಗಳು, ಚಿಂತನ ಮಂಥನ ಸಭೆ ನಡೆಸಿದರು.

ಈ ಸಭೆಯಲ್ಲಿ ಬೆಳಗಾವಿಯ ಪೀರ್ ಪಾಷಾ ದರ್ಗಾವೇ ಬಸವಣ್ಣನವ ಮೂಲ ಅನುಭವ ಮಂಟಪವಾಗಿದೆ. ಇದಕ್ಕೆ ದಾಖಲೆಗೇ ಹೇಳುತ್ತವೆ. ಸರ್ಕಾರ ಇದನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಜಿಲ್ಲಾಧಿಕಾರಿಗಳ ಮೂಲಕ, ರಾಜ್ಯ ಸರ್ಕಾರಕ್ಕೆ ಸ್ವಾಮೀಜಿಗಳು ಕೈಗೊಂಡಂತ ನಿರ್ಣಯವನ್ನು ಕಳುಹಿಸಿಕೊಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದಂತ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿಯವರು, ಮೂಲ ಅನುಭವ ಮಂಟಪ ಎಲ್ಲಿದೆ ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ಸರ್ಕಾರ ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಪುರಾತತ್ವ ಇಲಾಖೆಯ ಮೂಲಕ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು. ಚಿಂತನಮಂತನ ಸಭೆಗೂ ಮುನ್ನಾ, ಸ್ವಾಮೀಜಿಗಳು ಥೇರ್ ಮೈದಾನದಿಂದ ಬಿಕೆಡಿಬಿ ಸಭಾಭವನದವರೆಗೆ ಮೆರೆವಣಿಗೆಯಲ್ಲಿ ಸಾಗಿದರು.

Edited By : Nagaraj Tulugeri
PublicNext

PublicNext

12/06/2022 04:50 pm

Cinque Terre

68.32 K

Cinque Terre

17