ಗಂಗಾವತಿ : ಟಿಟಿಡಿ, ಮಹಾರಾಷ್ಟ್ರ ಬಳಿ ಯಾವುದೇ ದಾಖಲೆಗಳಿಲ್ಲ. ಸುಮ್ಮನೇ ಹನುಮನ ಜನ್ಮಸ್ಥಳ ಎಂದು ವಾದಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯೇ ಹನುಮನ ನಿಜವಾದ ಜನ್ಮಸ್ಥಳ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯೇ ಹನುಮನ ನಿಜವಾದ ಜನ್ಮಸ್ಥಳ. ಏನೇ ಗೊಂದಲ ಮಾಡಿದ್ರು ಇದೇ ಹನುಮನ ಜನ್ಮಸ್ಥಳ. ಇಲ್ಲಿನ ಒಂದೊಂದು ಕಲ್ಲು ಇತಿಹಾಸ ಹೇಳುತ್ತೆ ಎಂದರು.
ಇನ್ನು ಇದೇ ವೇಳೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಜಯಲಕ್ಷ್ಮೀ ವಿಗ್ರಹಕ್ಕೆ ಧಕ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, “ದೈವ ಇಚ್ಛೆಯಂತೆ ದೇಗುಲದ ಜೀರ್ಣೋದ್ಧಾರ ಮಾಡ್ತಿದ್ದೇವೆ. ಈ ವಿಚಾರದಲ್ಲಿ ನಮ್ಮ ಯಾವುದೇ ಸ್ವಾರ್ಥ ಇಲ್ಲ. ನಿಧಿಗಾಗಿ ಜೀರ್ಣೋದ್ಧಾರ ಎಂಬ ಆರೋಪ ಆಧಾರ ರಹಿತವಾಗಿದ್ದು, ಮೂಲ ವಿಗ್ರಹಕ್ಕೆ ಯಾವುದೇ ಧಕ್ಕೆ ಆಗಿಲ್ಲ” ಎಂದರು.
PublicNext
08/06/2022 10:14 pm