ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗ ಅಲ್ಲ, ಕಾರಂಜಿ: ಓವೈಸಿ

ನವದೆಹಲಿ: ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾಗಿರುವುದು ಶಿವಲಿಂಗವಲ್ಲ, ಅದು ಕಾರಂಜಿ. ಇದೇ ರೀತಿ ನಡೆದರೆ ತಾಜ್‌ಮಹಲ್‌ನ ಎಲ್ಲಾ ಕಾರಂಜಿಗಳನ್ನು ಮುಚ್ಚಬೇಕಾಗುತ್ತದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಓವೈಸಿ, ತಾಜ್ ಮಹಲ್‌ನ ಎಲ್ಲಾ ಕಾರಂಜಿಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ, 'ದಂಗೆಗಳು ನಡೆಯುತ್ತಿದ್ದ ಕಾಲಘಟ್ಟವಾದ 1990ಕ್ಕೆ ದೇಶವನ್ನು ಕೊಂಡೊಯ್ಯಲು ಬಿಜೆಪಿ ಬಯಸುತ್ತಿದೆ' ಎಂದು ಹೇಳಿದ್ದಾರೆ.

ಮುಸ್ಲಿಮರಿಗೆ ಧಾರ್ಮಿಕ ಆಚರಣೆಗೆ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿ. ಅಂದರೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೊದಲು ಶುದ್ಧೀಕರಣದ ಧಾರ್ಮಿಕ ಕ್ರಿಯೆಯಾದ 'ವುಜು ಖಾನಾ' ಮಾಡಬಹುದು ಎಂದರು.

Edited By : Vijay Kumar
PublicNext

PublicNext

19/05/2022 10:50 pm

Cinque Terre

51.14 K

Cinque Terre

36

ಸಂಬಂಧಿತ ಸುದ್ದಿ