ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ್ಞಾನವ್ಯಾಪಿ ಮಸೀದಿ ವಿವಾದ: ಅಂಗೈ ಹುಣ್ಣಿಗೆ ಕನ್ನಡಿಬೇಕೆ ಎಂದ ಸಿಟಿ ರವಿ

ಕಲಬುರಗಿ: ಜ್ನಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಆಗಿದೆ. ಇದು ಹಿಂದೂ ದೇವಾಲಯ ಅಂತ ಗೊತ್ತೇ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯೋ ಅಗತ್ಯ ಇಲ್ಲವೇ ಇಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಕಲಬುರಗಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಸಿ.ಟಿ.ರವಿ,ಮೊಘಲರು ಮತ್ತು ಇತರ ಮುಸ್ಲಿಂ ದೊರೆಗಳು ಹಿಂದೂ ದೇವಾಲಯಗಳನ್ನ ನಾಶ ಮಾಡಿಯೇ ಮಸೀದಿ ಕಟ್ಟಿದ್ದರು. ಇದಕ್ಕೆ ಕನ್ನಡಿ ಹಿಡಿಯುವ ಕೆಲಸವನ್ನ ನ್ಯಾಯಾಲ ಮಾಡುತ್ತಿದೆ ಎಂದು ಹೇಳಿದ್ದಾರೆ ಸಿಟಿ ರವಿ.

ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ದೇವಸ್ಥಾನದ ಬಗ್ಗೆನೂ ಸಿ.ಟಿ.ರವಿ ಪ್ರತಿಕ್ರಿಯೆ ಕೊಟ್ಟಿದ್ದು, ಟಿಪ್ಪು ಕಾಲದಲ್ಲಿಯೇ ದೇವಸ್ಥಾನದ ಮೇಲೇನೆ ಮಸೀದಿ ಕಟ್ಟಲಾಗಿದೆ. ಟಿಪ್ಪು ಒಬ್ಬ ಕನ್ನಡ ಪ್ರೇಮಿ ಅಂತಲೇ ಹೇಳ್ತಾರೆ.

ಆದರೆ, ಕನ್ನಡ ತೆಗೆದು ಹಾಕಿ ಪರ್ಶಿಯನ್ ಭಾಷೆಯನ್ನೆ ಆಗ ಆಡಳಿತ ಭಾಷೆಯಾಗಿ ಮಾಡಲಾಗಿತ್ತು. ಅದು ಟಿಪ್ಪು ಕಾಲದಲ್ಲಿಯೇ ಆಗಿದೆ ಎಂದು ಇತಿಹಾಸದ ಆ ಕಥೆ ಹೇಳಿದ್ದಾರೆ ಸಿ.ಟಿ.ರವಿ.

ಟಿಪ್ಪು ಒಬ್ಬ ಕನ್ನಡ ಪ್ರೇಮಿ ಅಂತ ಕೆಲವರು ತಪ್ಪು ಮಾಹಿತಿಯಿಂದಲೇ ಈಗಲೂ ಹೇಳುತ್ತಿದ್ದಾರೆ. ಇನ್ನೂ ಕೆಲವರು ದುರುದ್ದೇಶದಿಂದಲೇ ಟಿಪ್ಪು ಕನ್ನಡ ಪ್ರೇಮಿ ಅಂತಲೇ ಹೇಳುತ್ತಿದ್ದಾರೆ ಎಂದು ಸಿ.ಟಿ.ರವಿ ವಿವರಿಸಿದ್ದಾರೆ.

Edited By : Shivu K
PublicNext

PublicNext

16/05/2022 03:13 pm

Cinque Terre

54.27 K

Cinque Terre

11

ಸಂಬಂಧಿತ ಸುದ್ದಿ