ಶಿವಮೊಗ್ಗ: ಮೂಲ ಹಿಂದೂ ದೇವಾಲಯಗಳಿಗೆ ಸೇರಿದ ಅತಿಕ್ರಮಿತ ಜಾಗಗಳನ್ನು ನಾವು ವಾಪಸ್ ಪಡೆಯುತ್ತೇವೆ. ಇದಕ್ಕಾಗಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀರಂಗಪಟ್ಟಣದ ಮಸೀದಿಯ ಜಾಗದಲ್ಲಿ ಆಂಜನೇಯ ದೇವಸ್ಥಾನ ಇತ್ತು. ಮಸೀದಿ ನಿರ್ಮಿಸುವಾಗ ದೇವಸ್ಥಾನವನ್ನು ಸ್ಥಳಾಂತರಿಸಿದ್ದೇವೆ ಎಂದು ಸ್ವತಃ ಮುಸ್ಲಿಮರೇ ಒಪ್ಪಿಕೊಂಡಿದ್ದಾರೆ. ಮೊಘಲ್ ಆಳ್ವಿಕೆಯಲ್ಲಿ ದೇಶದ 36 ಸಾವಿರ ದೇವಾಲಯಗಳನ್ನು ಕೆಡವಿದ್ದಾರೆ. ಇದು ದಿನಗಳೆದಂತೆ ಬೆಳಕಿಗೆ ಬರುತ್ತಿದೆ. ಈ ಎಲ್ಲ ದೇವಸ್ಥಾನಗಳನ್ನು ವಾಪಸ್ ಪಡೆಯಲು ನಾವು ಕಾನೂನು ಹೋರಾಟ ಮಾಡುತ್ತೇವೆ. ಸಂಘರ್ಷ ಇಲ್ಲದೇ ಎಲ್ಲವನ್ನೂ ಬಗೆಹರಿಸಿಕೊಳ್ಳುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ.
PublicNext
16/05/2022 10:44 am