ಬೆಂಗಳೂರು: ರಾಜ್ಯದಲ್ಲಿ ಸಮುದಾಯ ಸಂಘರ್ಷಗಳು ಹೆಚ್ಚಾಗಿವೆ. ಈಗಿನ ಅಶಾಂತಿ ವಾತಾವರಣದ ವಿರುದ್ಧ ಎಲ್ಲ ಸ್ವಾಮೀಜಿಗಳು ಧ್ವನಿ ಎತ್ತಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ 'ಸಮಾನತಾ ದಿನ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಟ್ಟಿದಾಗ ಇಂಥದ್ದೇ ಧರ್ಮದಲ್ಲಿ ಹುಟ್ಟಬೇಕು ಎಂದು ಯಾರೂ ಕೂಡ ಅರ್ಜಿ ಹಾಕಿಕೊಂಡು ಹುಟ್ಟಿರುವುದಿಲ್ಲ. ನಾವು ಯಾವ ಧರ್ಮದಲ್ಲಿ ಹುಟ್ಟಿರುತ್ತೀವೋ ಆ ಧರ್ಮದ ಆಚರಣೆ ಮಾಡ್ತೀವಿ. ನಮ್ಮ ನಮ್ಮ ಧರ್ಮಗಳನ್ನು ನಾವು ಕಾಪಾಡಿಕೊಳ್ಳಬೇಕು. ಇಂದಿನ ಧರ್ಮ ಸಂಸತ್‌ನಲ್ಲಿ ಹಲವು ಸ್ವಾಮೀಜಿಗಳು ಸೇರಿದ್ದೀರಿ. ಸಮಾನತಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದೀರಿ. ಸಮಾನತಾ ದಿನ ಎಂದು ಹೇಳಿದ್ದೀರಿ. ರಾಜ್ಯದಲ್ಲಿ ಯಾರಿಗೆ ಸಮಾನತೆ ಇದೆ? ಎಲ್ಲ ಧರ್ಮೀಯರಿಗೂ ಶಾಂತಿಯಿಂದ ಬದುಕುವ ವಾತಾವರಣ ಸೃಷ್ಟಿಯಾಗಲು ಸ್ವಾಮೀಜಿಗಳು ಆಶೀರ್ವಾದ ಮಾಡಬೇಕು ಎಂದು ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
PublicNext
11/04/2022 06:08 pm