ಬೆಂಗಳೂರು: ಸಿದ್ದಗಂಗಾ ಮಠದ ಶ್ರೀಗಳು ನಿಧನರಾದಾಗ ರಾಜಕೀಯ ವ್ಯಕ್ತಿಗಳು ಹೆಚ್ಚು ಇತ್ತ ಸುಳಿಯಲೇ ಇಲ್ಲ. ಆದರೆ ಅವರ ಜಯಂತೋತ್ಸವಕ್ಕೆ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿ ಬಂದಿದ್ದಾರೆ. ಬಿಜೆಪಿಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಆದರೆ,ಈ ಒಂದು ಆಗಮನದ ಹಿಂದೆ ರಾಜಕೀಯ ಹಿತಾಸಕ್ತಿನೂ ಇದೆ ಅಂತಲೇ ಅಂದಾಜಿಸಲಾಗುತ್ತಿದೆ. ಮುಂಬರೋ 2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿಯೇ ಈ ನಾಯಕರು ಕರ್ನಾಟಕಕ್ಕೆ ಕಾಲಿಟ್ಟಿದ್ದಾರೆ ಅನ್ನೋ ಮಾತು ಈಗ ದಟ್ಟವಾಗಿಯೇ ಕೇಳಿ ಬರುತ್ತಿದೆ.
2019 ಜನವರಿ-01 ರಂದು ಕೇಂದ್ರ ಯಾವುದೇ ನಾಯಕರೂ ಸಿದ್ದಗಂಗಾ ಶ್ರೀಗಳಿಗೆ ಶ್ರದ್ದಾಂಜಲಿ ಅರ್ಪಿಸಲೂ ಕೂಡ ಆಗಮಿಸಿರಲಿಲ್ಲ. ಆದರೆ ಈಗ ಕರ್ನಾಟಕದ ಮತದಾರರ ಓಕೈಗೆ ಈ ನಾಯಕರು ಇಲ್ಲಿಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
PublicNext
31/03/2022 04:25 pm