ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸದನದಲ್ಲಿ ಹಲಾಲ್ ಕಲಹ: ವಾಟ್ಸ್ಆ್ಯಪ್ ಸಂದೇಶ ನೋಡಿದ್ರೆ ಭಯ ಆಗುತ್ತೆ

ಬೆಂಗಳೂರು: ರಾಜ್ಯದಲ್ಲಿ ಈಗ ಮುಸ್ಲಿಂ ವ್ಯಾಪಾರಿಗಳಿಂದ ಮಾಂಸ ಖರೀದಿಸಬೇಡಿ. ಅದು ಹಲಾಲ್ ಮಾಡಿದಂತ ಮಾಂಸವಾಗಿದೆ ಎಂಬ ಅಭಿಯಾನ ಜೋರಾಗಿ ಸುದ್ದು ಮಾಡಿದೆ. ಈ ಬಗ್ಗೆ ಇಂದು ರಾಜ್ಯ ವಿಧಾನಸಭೆಯಲ್ಲಿ ಹಲಾಲ್ ವಿವಾದದ ಸದ್ದು, ಪ್ರಸ್ತಾಪವಾಗಿದೆ. 'ವಾಟ್ಸ್ಆ್ಯಪ್ ಸಂದೇಶ ನೋಡಿದ್ರೆ ಭಯವಾಗುತ್ತೆ' ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಇಂದು ವಿಧಾನಸಭೆಯಲ್ಲಿ ಹಲಾಲ್ ವಿವಾದದ ವಿಷಯ ಪ್ರಸ್ತಾಪಿಸಿದಂತ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ, ನಾವು ಯುಗಾದಿಯಂದು ಮಾಂಸ ಖರೀದಿಸುತ್ತೇವೆ. ಆಗ ಹಲಾಲ್ ಮಾಡಿದ್ಯೋ ಅಥವಾ ಇಲ್ಲವೋ ಎಂಬುದನ್ನು ನೋಡೋದಿಲ್ಲ. ಆ ಮಾಂಸವನ್ನು ದೇವರ ಪೂಜೆಗೂ ಇಡೋದಿಲ್ಲ. ಹೀಗಿದ್ದೂ, ಈಗ ಯಾಕೆ ಈ ವಾತಾವರಣ ನಿರ್ಮಾಣವಾಗಿದ್ಯೋ ಗೊತ್ತಿಲ್ಲ ಎಂಬುದಾಗಿ ಖೇದ ವ್ಯಕ್ತ ಪಡಿಸಿದರು.

ನನಗೆ ವಾಟ್ಸಾಪ್‌ಗಳಲ್ಲಿ ಹಲಾಲ್ ಮಾಂಸ ನಿಷೇಧಿಸಲು ಒತ್ತಾಯಿಸಿ ಬರುವ ಸಂದೇಶ ನೋಡಿದ್ರೆ ಭಯವಾಗುತ್ತೆ. ಯಾರೋ ತಿಳಿಗೇಡಿಗಳು ಇದನ್ನೆಲ್ಲ ಸೃಷ್ಟಿಸುತ್ತಿದ್ದಾರೆ. ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಇದಕ್ಕೆ ಪ್ರೋತ್ಸಾಹ ನೀಡಬೇಡಿ ಎಂದು ಹೇಳಿ, ಸದನದಲ್ಲೇ ವಾಟ್ಸ್ಆ್ಯಪ್ ಸಂದೇಶಗಳನ್ನು ಓದಿದ್ದಾರೆ.

Edited By : Nagaraj Tulugeri
PublicNext

PublicNext

30/03/2022 07:03 pm

Cinque Terre

31.17 K

Cinque Terre

2