ಚಾಮರಾಜನಗರ: ಎಲ್ಲ ಮುಸ್ಲಿಮರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರೂ ಅಲ್ಲ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡದವರು ದೇಶ್ರೋಹಿಗಳು ಎಂಬ ಹೇಳಿಕೆಗೆ ಚಾಮರಾಜನಗರದ ಕೊಳ್ಳೇಗಾಲದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಕಹಿ ಘಟನೆಗಳನ್ನು ಮರೆಯಬೇಕು, ನಾವೆಲ್ಲ ಒಟ್ಟಾಗಿ ಹೋಗಬೇಕು. ಹಳೆಯ ಕಹಿ ಘಟನೆಗಳು ಮರುಕಳಿಸಬಾರದು ಎಂದು ಚಿತ್ರ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಯಾರದೇ ಪ್ರಾಯೋಜಕತ್ವ ಇಲ್ಲ ಎಂದಿದ್ದಾರೆ. ನಾನೂ ಕೂಡ ಮುಸ್ಲಿಮರನ್ನು ಚಲನಚಿತ್ರಗಳಿಗೆ ಕರೆದುಕೊಂಡು ಹೋಗುತ್ತಿರುತ್ತೇನೆ. ಎಲ್ಲ ಮುಸ್ಲಿಂರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ ಎಂದರು.
ಇನ್ನು, ಫ್ಯಾಮಿಲಿ ಪಾಲಿಟಿಕ್ಸ್ ಬ್ರೇಕ್ ಹಾಕುವ ಮೋದಿ ಚಿಂತನೆಗೆ ಪ್ರತಿಕ್ರಿಯಿಸಿ, ರಾಜಕಾರಣವನ್ನೇ ಹೆಚ್ಚು ನೆಚ್ಚಿಕೊಂಡಿಲ್ಲ, ನನ್ನ ಮಗನ ಹಣೆಬರಹದಲ್ಲಿ ಬ್ರಹ್ಮ ಬರೆದಿದ್ದರೇ ಎಂಎಲ್ಎ ಆಗುತ್ತಾನೆ. ಇಲ್ಲದಿದ್ದರೇ ಇಲ್ಲ. ಆದರೆ, ಮೋದಿ ರೀತಿಯ ನಾಯಕರನ್ನು ಪಡೆದಿದ್ದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕೆಂದು ಎಂದರು.
ಇದೇ ವೇಳೆ, ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ಜಾರಿ ಚಿಂತನೆ ಬಗ್ಗೆ ಪ್ರತಿಕ್ರಿಯಿಸಿ, ತಾನಿನ್ನೂ ಆ ವಿಚಾರದಲ್ಲಿ ಎಲ್ ಬೋರ್ಡ್. ದೊಡ್ಡವರು ತೀರ್ಮಾನ ಮಾಡುತ್ತಾರೆ ಎಂದರು.
PublicNext
18/03/2022 01:37 pm