ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಆರ್‌ಎಸ್‌ಎಸ್ ಅಂದ್ರೆ ನಾಜಿ಼ ಸಂತತಿಯ ಅನ್‌ಎಡಿಟೆಡ್ ವರ್ಷನ್": ದಿನೇಶ್ ಗುಂಡೂರಾವ್

ಬೆಂಗಳೂರು: ಕೆಂಪು ಕೋಟೆ ಮೇಲೆ ಭಗವಾ ಧ್ವಜ ಹಾರಿಸುವ ಕಾಲ ಬರಬಹುದು ಎಂದು ಹೇಳಿದ್ದ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಸಮರ ಸಾರಿದೆ. ಇದರ ಭಾಗವಾಗಿ ಶಾಸಕ ದಿನೇಶ್ ಗುಂಡೂರಾವ್ ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಇಡೀ ದೇಶವನ್ನು ಕೇಸರಿಕರಣಗೊಳಿಸುವ ಹುನ್ನಾರ ಆರ್‌ಎಸ್‌ಎಸ್ ಪಡಸಾಲೆಯಲ್ಲಿ ನಡೆದಿದೆ. ಈಶ್ವರಪ್ಪ ಅವರು ಆರ್‌ಎಸ್‌ಎಸ್‌ನ ಕಾರ್ಯತಂತ್ರವನ್ನು ತಪ್ಪಿ ಬಾಯಿ ಬಿಟ್ಟಿದ್ದಾರೆ ಎಂದಿದ್ದಾರೆ. ನಾಜಿ಼ ಸಂತತಿಯ ಅನ್‌ಎಡಿಟೆಡ್ ವರ್ಷನ್ ಆಗಿರುವ ಆರ್‌ಎಸ್‌ಎಸ್‌ ಪ್ರಾರಂಭದಿಂದಲೂ ಸಂವಿಧಾನ ವಿರೋಧಿ. ಧ್ವಜ ವಿವಾದ ಆರ್‌ಎಸ್‍ಎಸ್ ಕಾರ್ಯಸೂಚಿಯ ಒಂದು ಭಾಗ. ನಾಜಿ ಸಂತತಿಯ ಅನ್‍ಡಿಟೆಡ್ ವರ್ಷನ್ ಆಗಿರುವ ಆರ್‌ಎಸ್‍ಎಸ್ ಪ್ರಾರಂಭದಿಂದಲೂ ಸಂವಿಧಾನ ವಿರೋಧಿ ಎಂದು ಕಿಡಿಕಾರಿದರು.

ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳುವ ಮನಃಸ್ಥಿತಿ ಆರ್‌ಎಸ್‍ಎಸ್‌ಗೆ ಆಗಲೂ ಇರಲಿಲ್ಲ. ಈಗಲೂ ಇಲ್ಲ. ತ್ರಿವರ್ಣ ಧ್ವಜದ ಬದಲು ಭಾಗಧ್ವಜವನ್ನು ರಾಷ್ಟ್ರೀಯ ಧ್ವಜವನ್ನಾಗಿ ಮಾಡುವ ಹಿಡನ್ ಅಜೆಂಡಾ ಆರ್‌ಎಸ್‍ಎಸ್‍ನದ್ದು. ಆರ್‌ಎಸ್‍ಎಸ್‌ನ ಈ ಅಜೆಂಡಾವೇ ಈಶ್ವರಪ್ಪ ಬಾಯಿಂದ ಹೊರಬಂದಿದೆಯಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.

Edited By : Nagaraj Tulugeri
PublicNext

PublicNext

17/02/2022 01:55 pm

Cinque Terre

54.56 K

Cinque Terre

28

ಸಂಬಂಧಿತ ಸುದ್ದಿ