ಬೆಳಗಾವಿ: ಹಿಜಾಬ್ ವಿವಾದ ತಾರಕಕ್ಕೇರಿದ ಈ ದಿನಗಳಲ್ಲಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮಾಡಿದ ಟ್ವೀಟ್ ಹೆಚ್ಚು ಗಮನ ಸೆಳೆದಿದೆ. ಸದ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ ಹಿನ್ನೆಲೆ ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು ಪರೀಕ್ಷೆಯನ್ನೇ ಬಹಿಷ್ಕರಿಸಿದ ಘಟನೆಗಳು ನಡೆಯುತ್ತುವೆ.
ಹಿಜಾಬ್ ವಿವಾದದ ಬಗ್ಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಮಾಡಿದ ಟ್ವೀಟ್ ಹೀಗಿದೆ...
"ನನ್ನ ಹಿಜಾಬ್‌ಅನ್ನು ಕಿತ್ತುಕೊಂಡರೆ
ನಾನು ಹಿಜಾಬ್ ಪರವಾಗಿದ್ದೇನೆ,
ನನ್ನ ಮೇಲೆ ಬಲವಂತವಾಗಿ ಹಿಜಾಬ್ ಹೇರಿದರೆ
ನಾನು ಹಿಜಾಬ್ ವಿರುದ್ಧ" ಎಂದು ಬರೆದುಕೊಂಡಿರುವ ಶಾಸಕಿ ಅಂಜಲಿ ನಿಂಬಾಳ್ಕರ್ ಅದರ ಕೆಳಗೆ 'ಭಾರತದ ಮಗಳು' ಎಂದು ಬರೆದಿದ್ದಾರೆ.
ತಮ್ಮ ಈ ಟ್ವೀಟ್‌ಅನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ಟ್ಯಾಗ್ ಮಾಡಿದ್ದಾರೆ. ಹಾಗೂ ಕರ್ನಾಟಕ ಹೈಕೋರ್ಟ್‌ಗೆ ಹ್ಯಾಷ್ ಟ್ಯಾಗ್ ಮಾಡಿದ್ದಾರೆ.
PublicNext
15/02/2022 11:50 am